ಗುಜರಾತ್'ನಲ್ಲೇ ಉಳಿಯುವಂತೆ 9 ಕಾಂಗ್ರೆಸ್ ಶಾಸಕರಿಗೆ ಪೊಲೀಸ್ ರಕ್ಷಣೆ

By Suvarna Web DeskFirst Published Jul 31, 2017, 8:03 PM IST
Highlights

ರಾಜ್ಯಸಭಾ ಚುನಾವಣೆ ಗುಜರಾತ್ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಶಾಸಕರ ರಾಜಿನಾಮೆ ಕಾಂಗ್ರೆಸ್’ಗೆ ತಲೆನೋವಾಗಿ ಪರಿಣಮಿಸಿದೆ. ಕೆಲವೇ ದಿನಗಳಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದ್ದು ಅತ್ತ ಬಿಜೆಪಿ ಗೆಲುವಿನ ತಂತ್ರ ಹೆಣೆಯುತ್ತಿದ್ದರೆ ಇತ್ತ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್’ವೊಂದಕ್ಕೆ ಕರೆದುಕೊಂಡು ಬಂದು ರಾಜಕಾರಣ ಮಾಡುತ್ತಿದೆ. ಉಭಯ ಪಕ್ಷಗಳು ತಮ್ಮ ತಮ್ಮ ರಣತಂತ್ರಗಳನ್ನು ಹೆಣೆಯುತ್ತಿವೆ.

ಗುಜರಾತ್ (ಜು.31): ರಾಜ್ಯಸಭಾ ಚುನಾವಣೆ ಗುಜರಾತ್ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಶಾಸಕರ ರಾಜಿನಾಮೆ ಕಾಂಗ್ರೆಸ್’ಗೆ ತಲೆನೋವಾಗಿ ಪರಿಣಮಿಸಿದೆ. ಕೆಲವೇ ದಿನಗಳಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದ್ದು ಅತ್ತ ಬಿಜೆಪಿ ಗೆಲುವಿನ ತಂತ್ರ ಹೆಣೆಯುತ್ತಿದ್ದರೆ ಇತ್ತ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್’ವೊಂದಕ್ಕೆ ಕರೆದುಕೊಂಡು ಬಂದು ರಾಜಕಾರಣ ಮಾಡುತ್ತಿದೆ. ಉಭಯ ಪಕ್ಷಗಳು ತಮ್ಮ ತಮ್ಮ ರಣತಂತ್ರಗಳನ್ನು ಹೆಣೆಯುತ್ತಿವೆ.

42 ಮಂದಿ ಶಾಸಕರನ್ನು ಬೆಂಗಳೂರಿನ ರೆಸಾರ್ಟ್’ಗೆ ಕಳುಹಿಸಿದ ಬಳಿಕ ಇದೀಗ ಚುನಾವಣಾ ಆಯೋಗದ ಸೂಚನೆಯಂತೆ 9 ಮಂದಿ ಶಾಸಕರನ್ನು ಗುಜರಾತ್’ನಲ್ಲೇ ಉಳಿಯುವಂತೆ ಮಾಡಲು ಪೊಲೀಸ್ ರಕ್ಷಣೆ ನೀಡಲಾಗಿದೆ. 6 ಜನ ಬಂಡಾಯ ಶಾಸಕರು ಹಾಗೂ ವಲ್ಸದ್ ಜಿಲ್ಲೆಯ ಇಬ್ಬರು ಶಾಸಕರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Latest Videos

ಬೆಂಗಳೂರಿನಲ್ಲಿರುವ ಶಾಸಕರು ರಾಜ್ಯಕ್ಕೆ ಮರಳಲು ಸನ್ನದ್ಧರಾಗಿದ್ದಾರೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದರೆ ಅವರು ವಾಪಸ್ಸಾಗುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಶಕ್ತಿಸಿಂಗ್ ಗೋಹಿಲ್ ಹೇಳಿದ್ದಾರೆ.

click me!