ರೂಪ ವಿರುದ್ಧ 50 ಕೋಟಿ ರೂ. ಮೊಕದ್ದಮೆಗೆ ಸಿದ್ದತೆ

By Suvarna Web DeskFirst Published Jul 31, 2017, 7:52 PM IST
Highlights

ಕಾರಣದಿಂದ ರೂಪಾವಿರುದ್ಧಸಿವಿಲ್,ಕ್ರಿಮಿನಲ್ಮತ್ತುಮನಿಲ್ಯಾಂಡ್ರಿಂಗ್ಕಾಯಿದೆ ಮೇಲೆಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ

ಬೆಂಗಳೂರು(ಜು.31): ಡಿಐಜಿ ರೂಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಡಿಜಿಪಿ ಸತ್ಯನಾರಾಯಣ ರಾವ್ ಸಿದ್ಧತೆ ನಡೆಸಿದ್ದಾರೆ.

ತಮ್ಮ ಮೇಲೆ ಮಾಡಿರುವ ಆರೋಪಗಳಿಗೆ ತಾವು ನೀಡಿರುವ ನೋಟಿಸ್​ಗೆ ರೂಪ ಅವರು ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ಹಾಕಲು ಸಂಪೂರ್ಣ ದಾಖಲೆಗಳ ಸಂಗ್ರಹಿಸಲಾಗುತ್ತಿದೆ' ಎಂದು ವಕೀಲ ಪುತ್ತಿಗೆ ರಮೇಶ್ ತಿಳಿಸಿದ್ದಾರೆ.

ರೂಪಾ ವರದಿಯ ವಿಚಾರದಲ್ಲಿ ಇಲಾಖೆ ನಿಯಮ ಪಾಲಿಸಿಲ್ಲ. ಈ ಮೂಲಕ ಸತ್ಯನಾರಾಯಣರಾವ್ ಅವರ ಚಾರಿತ್ರ್ಯಾ ವಧೆ ಮಾಡಲಾಗಿದೆ. ಇದಕ್ಕಾಗಿ ಸತ್ಯನಾರಾಯಣ ರಾವ್ ಅವರ ಕ್ಷಮೆ ಕೇಳಲು ನೊಟೀಸ್ ಕೊಡಲಾಗಿತ್ತು. ಆದರೆ ಯಾವುದೇ ಕ್ಷಮೆ ಕೇಳಿರಲಿಲ್ಲ. ಈ ಕಾರಣದಿಂದ ರೂಪಾ ವಿರುದ್ಧ ಸಿವಿಲ್,ಕ್ರಿಮಿನಲ್ ಮತ್ತು ಮನಿ ಲ್ಯಾಂಡ್ರಿಂಗ್ ಕಾಯಿದೆ ಮೇಲೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಸುವರ್ಣನ್ಯೂಸ್​ಗೆ ಡಿಜಿಪಿ ಸತ್ಯನಾರಾಯಣ ರಾವ್ ಪರ ವಕೀಲ ಪುತ್ತಿಗೆ ರಮೇಶ್ ತಿಳಿಸಿದ್ದಾರೆ.

ಸತ್ಯನಾರಾಯಣ ರಾವ್ ಅವರು ತಮ್ಮ ಸ್ವಂತ ಹಣದಿಂದ ಪ್ರಕರಣ ದಾಖಲಿಸಬೇಕಿದೆ. 50 ಕೋಟಿ ರೂ. ಸಿವಿಲ್ ಕೇಸ್ ಹಾಕಲು 50 ಲಕ್ಷ ರೂ. ತನಕ ಕೋರ್ಟ್ ಖರ್ಚುಗುತ್ತದೆ. ಸತ್ಯನಾರಾಯಣ್ ರಾವ್ ಅವರು ಹಣ ಹೊಂದಿಸಿಕೊಳ್ಳಬೇಕಿದೆ. ಸತ್ಯನಾರಾಯಣ್ ರಾವ್ ಹೇಳಿದ ತಕ್ಷಣ ಮಾನನಷ್ಟ ಮೊಕದ್ದಮೆಗೆ ನಿರ್ಧರಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.

 

click me!