ಕಮಲ್ ಹಾಸನ್ ಮತ್ತು 3 ಬಿಗ್’ಬಾಸ್ ಸ್ಪರ್ಧಿಗಳ ಮೇಲೆ 100 ಕೋಟಿ ಮಾನನಷ್ಟ ನೋಟಿಸ್

Published : Jul 31, 2017, 07:52 PM ISTUpdated : Apr 11, 2018, 01:08 PM IST
ಕಮಲ್ ಹಾಸನ್ ಮತ್ತು 3 ಬಿಗ್’ಬಾಸ್ ಸ್ಪರ್ಧಿಗಳ ಮೇಲೆ 100 ಕೋಟಿ ಮಾನನಷ್ಟ ನೋಟಿಸ್

ಸಾರಾಂಶ

ತಮಿಳು ಬಿಗ್’ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ನಟ ಕಮಲ್ ಹಾಸನ್, ಕೋರಿಯೋಗ್ರಾಫರ್ ಗಾಯತ್ರಿ ರಘುರಾಮ್ ಮತ್ತು ಮೂವರಿಗೆ ಸಂಘಟನೆಯೊಂದು ಮಾನನಷ್ಟ ಮೊಕದ್ದಮೆ ಹಾಕಿ, ರೂ.100 ಕೋಟಿ ನೀಡಬೇಕೆಂದು ನೋಟಿಸ್ ನೀಡಿದೆ.

ಚೆನ್ನೈ (ಜು.31): ತಮಿಳು ಬಿಗ್’ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ನಟ ಕಮಲ್ ಹಾಸನ್, ಕೋರಿಯೋಗ್ರಾಫರ್ ಗಾಯತ್ರಿ ರಘುರಾಮ್ ಮತ್ತು ಮೂವರಿಗೆ ಸಂಘಟನೆಯೊಂದು ಮಾನನಷ್ಟ ಮೊಕದ್ದಮೆ ಹಾಕಿ, ರೂ.100 ಕೋಟಿ ನೀಡಬೇಕೆಂದು ನೋಟಿಸ್ ನೀಡಿದೆ.

ರಘುರಾಮ್ ತನ್ನ ಸಹ ಸ್ಪರ್ಧಿಗೆ ಕೊಳಗೇರಿ ನಿವಾಸಿ ಎನ್ನುವ ಪದವನ್ನು ಬಳಸುತ್ತಾರೆ. ಇದು ಹಿಂದುಳಿದ ವರ್ಗದವರ ಭಾವನೆಗಳಿಗೆ ನೋವುಂಟು ಮಾಡಿದೆ. ಕಮಲ್ ಹಾಸನ್ ಶೋ ಹೋಸ್ಟ್ ಮಾಡಿದವರು. ರಘುರಾಮ್ ಈ ರೀತಿ ಪದ ಬಳಕೆ ಮಾಡಿದಾಗ ಅದನ್ನು ಖಂಡಿಸಬೇಕಿತ್ತು. ಆದರೆ ಅವರು ಇದರ ಬಗ್ಗೆ ವಿಷಾದವನ್ನಾಗಲಿ, ಪ್ರತಿಕ್ರಿಯೆಯನ್ನಾಗಲಿ ನೀಡದೇ ಸುಮ್ಮನಿದ್ದರು ಎಂದು ಸಂಘಟನೆ ಆರೋಪಿಸಿದೆ.  7 ದಿನಗಳೊಳಗಾಗಿ ಇವರು ಬೇಷರತ್  ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ರೂ.100 ಕೋಟಿ ಪರಿಹಾರ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಕಮಲ್ ಹಾಸನ್ ಹಾಗೂ ಎಐಡಿಎಂಕೆ ನಡುವೆ ಮಾತುನ ಸಮರ ನಡೆದು ಅವರು ರಾಜಕೀಯ ಸೇರುವ ವಿಚಾರವನ್ನು ಕೈ ಬಿಟ್ಟಾಗ ಈ ನೋಟಿಸ್ ಬಂದಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ