
ದೊಡ್ಡ ನೋಟುಗಳು ರದ್ದಾಗಿರುವುದು ಜನರನ್ನು ಸಮಸ್ಯೆಗೆ ದೂಡಿದೆ. ಆಂಧ್ರದ ವಿಶಾಖಪಟ್ಟಣಂ ಜಿಲ್ಲೆಯ ಪಾಡೆರುನಲ್ಲಿ ಪೊಲೀಸ್ ಪೇದೆಯೋರ್ವ ದುಡ್ಡು ಸಿಗಲಿಲ್ಲ ಎಂಬ ಕಾರಣಕ್ಕೆ ಎಟಿಎಂ ಯಂತ್ರವನ್ನು ಕಾಲಿನಿಂದ ಒದ್ದು ಧ್ವಂಸಗೊಳಿಸಿದ್ದಾನೆ. ಪಾಡೆರುನಲ್ಲಿ ಒಂದೇ ಒಂದು ಸ್ಟೇಟ್ ಬ್ಯಾಂಕ್ ಎಟಿಎಂ ಇದೆ. ಈ ಎಟಿಎಂನಲ್ಲಿ ದುಡ್ಡು ಬಿಡಿಸಲು ಜನ ಪರದಾಡಿದ್ದಾರೆ. ನಿನ್ನೆ ರಾತ್ರಿ ಪೇದೆ ಎಟಿಎಂನಲ್ಲಿ ದುಡ್ಡಿ ಬಿಡಿಸಲು ಕ್ಯೂ ನಿಂತಿದ್ದಾನೆ. ಆದ್ರೆ ಆತನ ಸರದಿ ಬರುವಷ್ಟರಲ್ಲಿ ಎಟಿಎಂ ಯಂತ್ರ ಕೆಟ್ಟು ಹೋಗಿದೆ.
ಇದ್ರಿಂದ ಸಿಟ್ಟಿಗೆದ್ದ ಪೇದೆ ಕಾಲಿನಿಂದ ಅದನ್ನು ಒದ್ದು ಕೋಪ ತೀರಿಸಿಕೊಂಡಿದ್ದಾನೆ. ಒಂದು ಯಂತ್ರವನ್ನು ಒದ್ದು ಹೊರಗೆ ಹೋದ ಪೇದೆ ಸಿಟ್ಟಿನಿಂದ ಹಿಂತಿರುಗಿ ಬಂದು ಇನ್ನೊಂದು ಯಂತ್ರದ ಮೇಲೂ ಪ್ರತಾಪ ತೋರಿಸಿದ್ದಾನೆ. ಇದ್ರಿಂದಾಗಿ ಎರಡು ಎಟಿಎಂ ಯಂತ್ರಗಳು ಕೆಟ್ಟು ನಿಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.