ಖದರ್ ತೊರಿಸಿದ ಮಾಜಿ ಶಾಸಕನಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.
ಯಾದಗಿರಿ, [ಅ.19]: ಮಾಜಿ ಶಾಸಕರೊಬ್ಬರು ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಆವಾಚ್ ಹಾಕಿದ ಘಟನೆ ಯಾದಗಿರಿ ಜಿಲ್ಲೆ ಸುರಪುರದಲ್ಲಿ ನಡೆದಿದೆ.
ಸುರಪುರದ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರೇ ಪೊಲೀಸರಿಗೆ ಆವಾಜ್ ಹಾಕಿದವರು. ತಾವು ಹೇಳಿದ ಸ್ಥಳಕ್ಕೆ ಬಂದಿಲ್ಲವೆಂದು ಠಾಣೆಗೆ ಬಂದು ಪೊಲೀಸರ ಮೇಲೆಯೇ ರೇಗಾಡಿದ್ದಾರೆ.
ಅಷ್ಟೇ ಅಲ್ಲದೇ ಶಾಸಕರು ಹಿಂಬಾಲಕರು ಪೊಲೀಸರಿಗೆ ಮನಬಂದಂತೆ ಬೈದಿದ್ದಾರೆ. ಈ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೇ ಅವಾಚ್ಯ ಶಬ್ಧ ಬಳಕೆ ಮಾಡಿದಕ್ಕೆ ಪೊಲೀಸರರು ಸ್ವಯಂ ಪ್ರೇರಿತವಾಗಿ ಎಫ್ ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸೇರಿ ಒಟ್ಟು 8 ಮಂದಿ ಮೇಲೆ ಎಫ್ ಐಆರ್ ದಾಖಲಾಗಿದೆ.