ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪರೈಗೆ ಆಯುಧ ಪೂಜೆ ಸಂಕಷ್ಟ ತಂದೊಡ್ಡಿದೆ.
ಬೆಂಗಳೂರು, [ಅ.19]: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈಗೆ ಬೆಂಗಳೂರು ನಗರ ಪೊಲೀಸ್ [ಸಿಸಿಬಿ] ನೋಟಿಸ್ ನೀಡಿದೆ.
ತಮ್ಮ ಬಳಿ ಇರುವ ಎಲ್ಲಾ ಶಸ್ತ್ರಾಸ್ತ್ರಗಳು ಜೊತೆಗೆ ಅವುಗಳಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳ ಸಮೇತ 24 ಗಂಟೆಯೊಳೆಗೆ ಹಾಜರಾಗಬೇಕೆಂದು ಸಿಸಿಬಿ ಡಿಸಿಪಿ ಗಿರೀಶ್ ಅವರು ನೋಟಿಸ್ ನಲ್ಲಿ ಸೂಚಿಸಿದ್ದಾರೆ.
ಮುತ್ತಪ್ಪ ರೈ ಆಯುಧ ಪೂಜೆ ಮಾಡಿದ್ದು ಹೀಗೆ..!
ಮುತ್ತಪ್ಪ ರೈ ಕುಟುಂಬ ನಿನ್ನೆ [ಗುರುವಾರ] ಆಯುಧ ಪೂಜೆ ವೇಳೆ ಗನ್ ಹಾಗೂ ಮಾರಾಕಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ದರು. ಆ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಡಿಸಿಪಿ ಗಿರೀಶ್ ಅವರು ನೋಟಿಸ್ ನೀಡಿದ್ದಾರೆ.
4 ರಿವಾಲ್ವರ್, 3 ಗನ್, 1 ಡ್ರ್ಯಾಗರ್ಗೆ ಮಾಡಿದ್ದ ಪೂಜೆಯೇ ಇದೀಗ ಮುತ್ತಪ್ಪ ರೈಗೆ ಸಂಕಷ್ಟ ತಂದೊಡ್ಡಿದೆ.