
ನವದೆಹಲಿ: ನಟಿ ಪ್ರೀತಿ ಜಿಂಟಾ, ತಮ್ಮ ಮಾಜಿ ಗೆಳೆಯ ಉದ್ಯಮಿ ನೆಸ್ ವಾಡಿಯಾ ವಿರುದ್ಧ 4 ವರ್ಷಗಳ ಹಿಂದೆ ಸಲ್ಲಿಸಿದ್ದ ಕಿರುಕುಳದ ದೂರಿನ ಪ್ರಕರಣ ಸಂಬಂಧ ಪೊಲೀಸರು ಇದೀಗ 500 ಪುಟಗಳ ಆರೋಪ ಪಟ್ಟಿಸಲ್ಲಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಪ್ರೀತಿ ಮತ್ತು ನೆಸ್ ಪಾಲುದಾರರಾಗಿದ್ದರು. ಈ ವೇಳೆ ಅವರ ನಡುವೆ ಆತ್ಮೀಯ ಗೆಳೆತನವಿತ್ತು. ಆದರೆ ಬಳಿಕ ಸಂಬಂಧ ಹಳಸಿತ್ತು.
ಈ ನಡುವೆ ಐಪಿಎಲ್ ಪಂದ್ಯಾಟಗಳ ವೇಳೆ ತಮಗೆ ನೆಸ್ ವಾಡಿಯಾ, ದೈಹಿಕ ಹಿಂಸೆ ಹಾಗು ಬೆದರಿಕೆ ನೀಡಿದ್ದಾಗಿ ಪ್ರೀತಿ ದೂರು ನೀಡಿದ್ದರು. ಅಲ್ಲದೆ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಕೇವಲ ನನ್ನೊಂದಿಗೆ ಮಾತ್ರವಲ್ಲದೆ ಟೀಮ್‌ನ ಇತರ ಸದಸ್ಯರೊಂದಿಗೂ ಹಲವು ಬಾರಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.