
ಬೆಂಗಳೂರು (ಫೆ.21): ರಾಹುಲ್ ಗಾಂಧಿ ಮುಂಬೈ ಕನಾ೯ಟಕ ಪ್ರವಾಸ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ಕಾದಿದೆ.
ರಾಯಣ್ಣ ಬ್ರಿಗೇಡ್’ನ ಕಟ್ಟಾ ಈಶ್ವರಪ್ಪನ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳಿಧರರಾವ್ ಇಂದು ಬೆಂಗಳೂರಿನಲ್ಲಿ ಅತೃಪ್ತಗೊಂಡ ಬ್ರಿಗೇಡ್ ನಾಯಕರ ಸಭೆ ಕರೆದಿದ್ದಾರೆ.
ಸಭೆಗೆ ಬ್ರಿಗೇಡ್ ರಾಜ್ಯಾದ್ಯಕ್ಷ ವಿರುಪಾಕ್ಷಪ್ಪ, ರಾಜ್ಯ ಪ್ರಧಾನ ಕಾಯ೯ದಶಿ೯ ಕಾಶೀನಾಥ ಹುಡೇದ ಸೇರಿದಂತೆ ನಾಯಕರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಭಾಗವಹಿಸಲು ಬಾಗಲಕೋಟೆಯಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ ಬ್ರಿಗೇಡ್ ಮುಖಂಡರು.
ಈಶ್ವರಪ್ಪರನ್ನ ಬಿಜೆಪಿಯಲ್ಲಿ ಕಡೆಗಣಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕೈ ಬಿಡಲು ಬ್ರಿಗೇಡ್ ನಾಯಕರು ನಿಧಾ೯ರ ಮಾಡಿದ್ದರು. ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ರಾಯಣ್ಣ ಬ್ರಿಗೇಡ್ ಪ್ರಧಾನ ಕಾಯ೯ದಶಿ೯ ಕಾಶೀನಾಥ ಹುಡೇದ ಕಾಂಗ್ರೆಸ್ ಸೇಪ೯ಡೆಗೆ ನಿರ್ಧರಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರೊಂದಿಗೂ ಕಾಶೀನಾಥ ಹುಡೇದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಸೇರಿದಂತೆ ಉತ್ತರ ಕನಾ೯ಟಕದ ಜಿಲ್ಲೆಗಳ ಮೇಲೆ ಇದು ಪರಿಣಾಮ ಬೀರಲಿದೆ. ದಿಢೀರ್ ಬೆಳವಣಿಗೆಯಿಂದ ಉಸ್ತುವಾರಿ ಮುರುಳೀಧರರಾವ್ ಇಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಕಾಂಗ್ರೆಸ್ ನತ್ತ ಮುಖ ಮಾಡಿದ ಬಿಜೆಪಿ ನಾಯಕರನ್ನ ತಡೆಯಲು ಯತ್ನ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.