
ಹಂಪಿ (ಮೇ.13): ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ ವಿರುದ್ಧ ಫೇಸ್ಬುಕ್’ನಲ್ಲಿ ಅವಹೇಳನಕಾರಿ ಹೇಳಿಕೆ ಹಾಕಿರುವ ಆರೋಪದ ಮೇಲೆ, ವಿವಿ ಅಧೀಕ್ಷಕ ಹೆಚ್.ಎಂ.ಸೋಮನಾಥ್’ರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಕುಲಪತಿ ಆಗಿರುವ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಲಾಗಿತ್ತು. ಆದರೆ, ಈ ಪ್ರಶಸ್ತಿ ನೀಡಿದ್ದಕ್ಕೆ ವಿವಿ ಅಧೀಕ್ಷಕ ಸೋಮನಾಥ್, ಸಾಮಾಜಿಕ ಜಾಲತಾಣತಲ್ಲಿ ಟೀಕಿಸಿದ್ದರು.
ಅಕ್ಕಮಹಾದೇವಿ ಪ್ರಶಸ್ತಿ ಯಾರಿಗಾಗಿ ಸೃಷ್ಟಿಸಲಾಯ್ತೋ, ಅವರಿಗೆ ದಕ್ಕಿದೆ ಎಂದು ಬರೆದಿದ್ದರು. ಈ ಬಗ್ಗೆ ಮಲ್ಲಿಕಾಗಂಟಿ ಕಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೋಲೀಸರು ಸೋಮನಾಥ್’ರನ್ನು ಹೊಸಪೇಟೆಯ ಅವರ ನಿವಾಸದಲ್ಲಿಯೇ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.