
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೊಂದು ಹನಿಟ್ರ್ಯಾಪ್ ಗ್ಯಾಂಗ್ ಅಂದರ್ ಆಗಿದೆ. ಕೊತ್ತನೂರು ಪೊಲೀಸರು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಐವರನ್ನು ಬಂಧಿಸಿದ್ದಾರೆ. ಶಾಯಿನ್, ಸಜೀದ್, ಶಬ್ಬರ್ ಶರೀಫ್, ನೂರಿ, ಸಲ್ಮಾ ಬಂಧಿತರು.. ಹೆಗ್ಡೆ ನಗರದ ಮನೆಯೊಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದು, ಬಂಧಿತರಾದ ಶಾಯಿನ್ ಹಾಗೂ ನೂರಿ ಗಿರಾಕಿಗಳಿಗೆ ಗಾಳ ಹಾಕುತ್ತಿದ್ದರು.
ಸುಂದರವಾದ ಚಿಕ್ಕ ವಯಸ್ಸಿನ ಹುಡುಗಿ ಇದ್ದಾಳೆ ಎಂದು ಹೇಳಿ ಮನೆಗೆ ಕರೆಸಿಕೊಳ್ಳುತ್ತಿದ್ದರು. ಬಳಿಕೆ ಯುವತಿ ಜೊತೆ ಗಿರಾಕಿಗಳು ಕೊಠಡಿಗೆ ತೆರಳುತ್ತಿದ್ದಂತೆ ಇಬ್ಬರು ಕ್ಯಾಮರಾ ತೆಗೆದುಕೊಂಡು ವಿಡಿಯೋ ಮಾಡಿ ಪೊಲೀಸರಿಗೆ ದೂರು ಕೊಡುವುದರ ಜೊತೆ ಇಂಟರ್ನೆಟ್, ವಾಟ್ಸಪ್'ನಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಸಿ ಲಕ್ಷಾಂತರ ಹಣವನ್ನು ಪೀಕುತ್ತಿದ್ದರು.
ಇದೇ ರೀತಿ ಡಿಜೆ ಹಳ್ಳಿ ನಿವಾಸಿ ಸೈಯಾದ್ ರೆಹಮತ್ ಎಂಬುವರಿಗೆ ಕರೆ ಮಾಡಿ ಹುಡುಗಿ ಇದ್ದಾಳೆ ಬನ್ನಿ ಎಂದು ಹೇಳಿದ್ದರು. ಶಾಯಿನ್ ಮನೆಗೆ ಸೈಯದ್ ರೆಹಮತ್ ಸಲ್ಮಾ ಎಂಬ ಯುವತಿಯ ಜೊತೆ ಇದ್ದಾಗ ರೂಮ್'ಗೆ ನುಗ್ಗಿ ನನ್ನ ಹೆಂಡತಿ ಜೊತೆ ಮಲಗಿದ್ದೀಯಾ ಎಂದು ಬೆದರಿಸಿ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸೈಯದ್ ರೆಹಮತ್ ಕೊತ್ತನೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.