ಯಾವುದೇ ಸಾಲ ನಿಭಾಯಿಸುವ ಸಾಮರ್ಥ್ಯ ನಮಗಿದೆ: ಪಿಎನ್‌ಬಿ

By Suvarna Web DeskFirst Published Feb 23, 2018, 8:41 AM IST
Highlights

ವಜ್ರೋದ್ಯಮಿ ನೀರವ್‌ ಮೋದಿಯ 11400 ಕೋಟಿ ರು. ಹಗರಣದ ಹೊರತಾಗಿಯೂ ಯಾವುದೇ ಸಾಲ ನಿಭಾಯಿಸಲು ಅಗತ್ಯವಾದ ಆಸ್ತಿ ಮತ್ತು ಬಂಡವಾಳ ತಮ್ಮಲ್ಲಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌(ಬಿಎಸ್‌ಇ)ಗೆ ಮಾಹಿತಿ ನೀಡಿದೆ.

ಮುಂಬೈ: ವಜ್ರೋದ್ಯಮಿ ನೀರವ್‌ ಮೋದಿಯ 11400 ಕೋಟಿ ರು. ಹಗರಣದ ಹೊರತಾಗಿಯೂ ಯಾವುದೇ ಸಾಲ ನಿಭಾಯಿಸಲು ಅಗತ್ಯವಾದ ಆಸ್ತಿ ಮತ್ತು ಬಂಡವಾಳ ತಮ್ಮಲ್ಲಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌(ಬಿಎಸ್‌ಇ)ಗೆ ಮಾಹಿತಿ ನೀಡಿದೆ.

ಅಲ್ಲದೆ, ನೀರವ್‌ ಮೋದಿ ಮತ್ತು ಅವರ ಅಧೀನ ಸಂಸ್ಥೆಗಳು ಮಾಡಿದ ಸಾಲವನ್ನು ವಾಪಸ್‌ ಪಡೆಯಲು ಅಗತ್ಯ ಕಾನೂನು ಪಾಲನೆ ಮಾಡುತ್ತಿರುವುದಾಗಿ ದೇಶದ 2ನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಪಿಎನ್‌ಬಿ ಸ್ಪಷ್ಟಪಡಿಸಿದೆ.

ಮೊದಲಿಗೆ ಇದೊಂದು 280 ಕೋಟಿ ರು. ಹಗರಣವೆಂದು ನಂತರ 11400 ಕೋಟಿ ರು. ಹಗರಣ ಮತ್ತು ಈ ಸಂಬಂಧ ಸಿಬಿಐಗೆ ಸಲ್ಲಿಸಿರುವ ದೂರಿನ ಕುರಿತು ತಮಗೇಕೆ ಮಾಹಿತಿ ನೀಡಿಲಿಲ್ಲ ಎಂಬುದು ಸೇರಿದಂತೆ ಬಿಎಸ್‌ಇ ಕೇಳಿದ ಹಲವು ಪ್ರಶ್ನೆಗಳಿಗೆ ಪಿಎನ್‌ಬಿ ಉತ್ತರಿಸಿದೆ.

click me!