
ನವದೆಹಲಿ: ಯೋಧರಿಗೆ ಯುದ್ಧ ಗೆಲ್ಲಲು ಸಂಘಟಿತ ಶಕ್ತಿಯ ಅಗತ್ಯ ಸದಾ ಇರುತ್ತದೆ. ಸಹಯೋಧ ಅಪಾಯದಲ್ಲಿದ್ದಾಗ, ಆತನ ಕಾಪಾಡುವುದು ಯೋಧನ ಕರ್ತವ್ಯವೂ ಹೌದು. ಅಂತಹುದೇ ಸನ್ನಿವೇಶದಲ್ಲಿ, ಖಡಕ್‌ವಾಲ್ಸದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಯ ಕ್ರಾಸ್‌ಕಂಟ್ರಿ ರಸ್ತೆ ಓಟದಲ್ಲಿ ಕೆಡೆಟ್ ಒಬ್ಬರು ತೆಗೆದುಕೊಂಡ ದಿಟ್ಟನಿರ್ಧಾರ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಸೇನಾ ಅಕಾಡೆಮಿ ಪಠ್ಯಕ್ರಮದಲ್ಲಿ 13.8 ಕಿ.ಮೀ. ಕ್ರಾಸ್‌ಕಂಟ್ರಿ ಓಟ ಅತ್ಯಂತ ಮುಖ್ಯವಾದುದು. ಫೆ. 10ರಂದು ನಡೆದ ಓಟದಲ್ಲಿ ಕೆಡೆಟ್ ಚಿರಾಗ್ ಅರೋರಾ, ಓಡುತ್ತಿದ್ದಾಗ ಗುರಿ ತಲುಪಲು ಇನ್ನೂ 2.5 ಕಿ.ಮೀ. ಇರುವಾಗ ಕಿರಿಯ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದನ್ನು ಗಮನಿಸಿದರು. ಅರೋರಾ ತಮ್ಮ ಗುರಿ ತಲುಪಬೇಕಾದ ಸಮಯ ಮಿತಿಯನ್ನು ಲೆಕ್ಕಿಸದೆ, ಬಿದ್ದಿದ್ದ ವಿದ್ಯಾರ್ಥಿಯನ್ನು ಎತ್ತಿ ತಮ್ಮ ಬೆನ್ನಮೇಲೆ ಹೇರಿಕೊಂಡು ಗುರಿಯತ್ತ ಓಡಿ, ಗುರಿ ಪೂರ್ಣಗೊಳಿಸಿದ್ದರು.
ಅರೋರಾರ ಈ ನಡೆ ಎಲ್ಲ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ಲೆ.ಜ. ಅಲೋಕ್ ಕ್ಲೇರ್, ರೇಬಾನ್ ಸನ್‌ಗ್ಲಾಸ್ ಒಂದನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಯಾವ ವ್ಯಕ್ತಿಯೂ ಹಿಂದೆ ಬೀಳದಂತೆ ನೋಡಿಕೊಳ್ಳುವುದು ಸೇನಾ ಸ್ಫೂರ್ತಿ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಂಬಾಲ ಎಚ್‌ಕ್ಯೂ2 ಕಾಫ್ಸ್‌ರ್‍ನ ಮುಖ್ಯಸ್ಥ ಕ್ಲೇರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.