ಮಲ್ಯ ಪರಾರಿಯಾಗಲು ಮೋದಿ ‘ನೆಚ್ಚಿನ’ ಸಿಬಿಐ ಅಧಿಕಾರಿ ಕಾರಣ: ರಾಹುಲ್!

Published : Sep 15, 2018, 06:33 PM ISTUpdated : Sep 19, 2018, 09:26 AM IST
ಮಲ್ಯ ಪರಾರಿಯಾಗಲು ಮೋದಿ ‘ನೆಚ್ಚಿನ’ ಸಿಬಿಐ ಅಧಿಕಾರಿ ಕಾರಣ: ರಾಹುಲ್!

ಸಾರಾಂಶ

ಮತ್ತೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್! ಮಲ್ಯ ಪರಾರಿಯಾಗಲು ಮೋದಿ ನೆಚ್ಚಿನ ಸಿಬಿಐ ಅಧಿಕಾರಿ ಕಾರಣ! ಟ್ವೀಟರ್‌ನಲ್ಲಿ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ! ಗುಜರಾತ್ ಕೆಡರ್ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ ವಿರುದ್ದ ಆರೋಪ! ನಿರವ್ ಮೋದಿ,ಮೆಹುಲ್ ಚೋಕ್ಸಿ ಪರಾರಿಯಾಗಲೂ ಶರ್ಮಾ ಕಾರಣ?

ನವದೆಹಲಿ(ಸೆ.15): ಪ್ರಧಾನಿ ನರೇಂದ್ರ ಮೋದಿ ಅವರ ‘ನೆಚ್ಚಿನ ಸಿಬಿಐ ಅಧಿಕಾರಿ’,  ದೇಶಭ್ರಷ್ಟ ವಿಜಯ್ ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಮಲ್ಯ ವಿದೇಶಕ್ಕೆ ಪರಾರಿಯಾಗಲು ಮೋದಿ ಅವರ ಈ ನೆಚ್ಚಿನ ಸಿಬಿಐ ಅಧಿಕಾರಿಯೇ ಕಾರಣ ಎಂದು ಆರೋಪಿಸಿದ್ದಾರೆ.

ಗುಜರಾತ್ ಕೆಡರ್ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ.

ವಜ್ರ ಉದ್ಯಮಿಗಳಾದ ನಿರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಹ ವಿದೇಶಕ್ಕೆ ಪರಾರಿಯಾಗುವಲ್ಲಿ ಇದೇ ಅಧಿಕಾರಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದೂ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾರುತಿ ಫ್ರಾಂಕ್ಸ್ ಫೇಸ್‌ಲಿಫ್ಟ್‌ನಿಂದ ಕ್ರೇಟಾಗೆ ಶುರುವಾಯ್ತು ನಡುಕ!: 35 ಕಿ.ಮೀ ಮೈಲೇಜ್, ADAS ಫೀಚರ್ಸ್‌ನೊಂದಿಗೆ ಭರ್ಜರಿ ಎಂಟ್ರಿ!
ಮಕ್ಕಳ ಅಡ್ಮೀಷನ್‌ ಕ್ಯಾನ್ಸಲ್‌ ಮಾಡಿದ ತಾಯಿಗೆ ರೀಫಂಡ್‌ ನೀಡದ ಸ್ಕೂಲ್‌, ಭಾರೀ ದಂಡ ವಿಧಿಸಿದ ಕೋರ್ಟ್‌