
ನವದೆಹಲಿ (ಮೇ 14): 1950ರಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಇಂಡೋನೇಷ್ಯಾದ ಅಂದಿನ ಅಧ್ಯಕ್ಷ ಸುಕಾರ್ಣೋರನ್ನು ಭೇಟಿ ಮಾಡಲು ಹಡಗಿನಲ್ಲಿ ಇಂಡೋ ನೇಷ್ಯಾ ಯಾತ್ರೆ ಕೈಗೊಂಡಿದ್ದರು.
ಇದೀಗ ಇದೇ ಮಾದರಿಯಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಂಡೋನೇಷ್ಯಾಗೆ ಹಡಗು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಇಂಡೋನೇಷ್ಯಾಗೆ ಮೇ 29 ರಿಂದ 31 ರವರೆಗೆ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಭಾರತದ ಅಂಡಮಾನ್-ನಿಕೋಬಾರ್ ದ್ವೀಪದ ಪೋರ್ಟ್‌ಬ್ಲೇರ್‌ನಿಂದ ಇಂಡೋನೇಷ್ಯಾದ ಅಸೆ ನಗರದವರೆಗೆ (100 ಕಿ.ಮೀ.) ಹಡಗು ಯಾನ ಕೈಗೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇಂಡೋನೇಷ್ಯಾ ಜತೆ ಇಂಡೋ-ಪೆಸಿಫಕ್ ವಲಯದಲ್ಲಿ ಸಮುದ್ರ ಸಂಬಂಧೀ ಬಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಡಗುಯಾನ ಮಹತ್ವದ್ದಾಗಿದೆ. ಬಳಿಕ ಅಲ್ಲಿಂದ ಮೋದಿ ಅವರು ಸಿಂಗಾಪುರ ಭೇಟಿಗೆ (ಜೂನ್ 1ರಿಂದ) ತೆರಳಲಿದ್ದಾರೆ. ಮೋದಿ ಅವರು ಇಂಡೋನೇಷ್ಯಾ ಭೇಟಿಯ ವೇಳೆ ಅಲ್ಲಿನ ಅಧ್ಯಕ್ಷ ಜೊಕೊ ವಿಡೊಡೊ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಜತೆಗೆ, ಐತಿಹಾಸಿಕ ಪರಂಬನ್ ಹಿಂದೂ ದೇವಾಲಯ, ವಿಶ್ವದ ಅತಿ ದೊಡ್ಡ ಬೌದ್ಧ ದೇವಾಲಯವಾದ ಯೋಗ್ಯಕರ್ತ ಕ್ಕೂ ಭೇಟಿ ನೀಡುವ ಕಾರ್ಯಕ್ರಮವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.