ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ರಮ್ಯಾ ಆಗ್ರಹ

By Internet DeskFirst Published Sep 27, 2016, 11:41 AM IST
Highlights

ಬೆಂಗಳೂರು (ಸೆ.27): ಕರ್ನಾಟಕದ ಯಾವುದೇ ವಾದಕ್ಕೆ ಮನ್ನಣೆ ನೀಡದೇ ಸುಪ್ರೀಂ ತಮಿಳುನಾಡಿಗೆ 3 ದಿನಗಳ ಕಾಲ 18 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿರುವುದು ಬೇಸರದ ವಿಚಾರ ಎಂದು ಮಂಡ್ಯ ಮಾಜಿ ಸಂಸದೆ ರಮ್ಯಾ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನ ಮಂತ್ರಿಯವರು ಉಭಯ ರಾಜ್ಯಗಳ ಮಧ್ಯ ಪ್ರವೇಶಿಸಿ ಒಂದು ಪರಿಹಾರ ಕಂಡುಹಿಡಿಯಬಹುದು. 124 ವರ್ಷಗಳಿಂದ ಕರ್ನಾಟಕ ತಮಿಳುನಾಡು ನಡುವೆ ಕಾವೇರಿ ವಿವಾದ ನಡೆಯುತ್ತಲೇ ಬಂದಿದೆ. 125 ನೇ ವರ್ಷವಾದರೂ ಒಂದು ಪರಿಹಾರ ಕಂಡು ಹಿಡಿಯಬಹುದಲ್ವಾ ಎಂದು ರಮ್ಯಾ ಪ್ರಶ್ನಿಸಿದ್ದಾರೆ.

ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲಿಯೂ ಕೂಡಾ ಇದೆ. ಡ್ಯಾಂನಲ್ಲಿ ನೀರಿಲ್ಲದೇ ಹೇಗೆ ಬಿಡಲು ಸಾಧ್ಯ? ಹಾಗಾಗಿ ಸುಪ್ರೀಂ ಆದೇಶ ಪಾಲಿಸಲು ಆಗುತ್ತಿಲ್ಲ. ಈಗ ನಮ್ಮ ಮುಂದಿರುವುದು ಒಂದೇ ದಾರಿ. ಇನ್ನೊಂದು ಠರಾವು ಪಾಸ್ ಮಾಡಿ ನಮಗೆ ನೀರು ಬಿಡಲು ಆಗುವುದಿಲ್ಲ ಅಂತ ಸರ್ಕಾರ ನಿರ್ಣಯ ಕೈಗೊಳ್ಳಲಿ. 2 ದಿನ ಸಮಯಾವಕಾಶ ಸಿಗುತ್ತದೆ. ಆಗ ಏನು ನಿರ್ಧಾರವಾಗುತ್ತದೋ ನೋಡೋಣ ಎಂದು ರಮ್ಯಾ ಹೇಳಿದ್ದಾರೆ.  

click me!