ಪ್ರಧಾನಿ ಮೋದಿ ಒಂದು ದಿನ ಉಪವಾಸ ಕೈಗೊಳ್ಳುವ ಕಾರಣವಾದರೂ ಏನು ?

By Suvarna Web DeskFirst Published Apr 10, 2018, 7:17 PM IST
Highlights

ಪ್ರಧಾನಿಯವವರು ಉಪವಾಸ ಕೈಗೊಂಡರೂ ನಿತ್ಯದ ಕಚೇರಿ ಕಾರ್ಯಚಟುವಟಿಕೆಗಳಿಗೆ ಯಾವುದೇ ಕುಂದುಂಟಾಗುವುದಿಲ್ಲ. ಎಂದಿನಂತೆಕಡತಗಳ ವಿಲೇವಾರಿಗಳನ್ನು ಪರಿಶೀಲಿಸಲಿದ್ದಾರೆ. ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ

ನವದೆಹಲಿ(ಏ.10): ವಿರೋಧ ಪಕ್ಷದವರು ಸಂಸತ್ ಕಲಾಪವನ್ನು ಅಡ್ಡಿ ಪಡಿಸುತ್ತಿರುವ ನಡೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಏ.12) ರಂದು ಒಂದು ದಿನದ ಉಪವಾಸ ಕೈಗೊಳ್ಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಶ್ನಿಮ ಬಂಗಾಳದ ಹುಬ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ನಿನ್ನೆಯಷ್ಟೆ ಕಾಂಗ್ರೆಸ್ ಪಕ್ಷ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಶಾಂತಿ ಸುವ್ಯವಸ್ತೆಯನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಕೈಗೊಂಡಿತ್ತು. ಕೆಲವು ಮುಖಂಡರು ಉಪವಾಸ ಕೂಡ ಕೈಗೊಂಡಿದ್ದರು.

ಪ್ರಧಾನಿಯವವರು ಉಪವಾಸ ಕೈಗೊಂಡರೂ ನಿತ್ಯದ ಕಚೇರಿ ಕಾರ್ಯಚಟುವಟಿಕೆಗಳಿಗೆ ಯಾವುದೇ ಕುಂದುಂಟಾಗುವುದಿಲ್ಲ. ಎಂದಿನಂತೆ  ಕಡತಗಳ ವಿಲೇವಾರಿಗಳನ್ನು ಪರಿಶೀಲಿಸಲಿದ್ದಾರೆ. ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ಅಲ್ಲದೆ ನಾಳೆ ಜ್ಯೋತಿಬಾಫುಲೆ ಜನ್ಮದಿನಾಚರಣೆ ಪ್ರಯುಕ್ತ ವಿಡಿಯೋ ಕಾನ್ಫೆರನ್ಸ್ ಮೂಲಕ ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

click me!