
ಬೆಂಗಳೂರು : ಪ್ರಯಾಣಿಕರಿಗೆ ಸೇರಿದ 5 ಲಕ್ಷದ ಚಕ್ ಮತ್ತು ಮನೆ ದಾಖಲಾತಿಯನ್ನು ಸಂಬಂಧಿಸಿದವರಿಗೆ ತಲುಪಿಸಿ ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಚಂದಾಪುರ ಡಿಪೋಗೆ ಸೇರಿದ ಬಿಎಂಟಿಸಿ ಸಿಬ್ಬಂದಿಯಿಂದ ಇಂತಹ ಜನ ಸ್ನೇಹಿ ಕಾರ್ಯ ನಡೆದಿದೆ. ವಾಲ್ಟರ್ ಮೆಸ್ಕ್ಯೂರೆನ್ ಎಂಬುವರಿಗೆ ಸೇರಿದ 5 ಲಕ್ಷ ರೂ. ಚೆಕ್ ಮತ್ತು ಮನೆ ದಾಖಲಾತಿಗಳನ್ನು ಹಿಂದಿರುಗಿಸಲಾಗಿದೆ
ಇಂದು ಬೆಳಗ್ಗೆ ಬಸ್ ನಲ್ಲಿ ದಾಖಲಾತಿ ಹಾಗೂ ಹಣದ ಚೆಕ್’ನ್ನು ಅವರು ಬಿಟ್ಟು ಹೋಗಿದ್ದರು. ಮಧ್ಯಾಹ್ನದ ಹೊತ್ತಿಗೆ ಬಿಎಂಟಿಸಿ ಸಿಬ್ಬಂದಿ ಈ ಎಲ್ಲಾ ವಸ್ತುಗಳನ್ನೂ ಕೂಡ ವಾಪಸ್ಸುನೀಡಿದ್ದಾರೆ.
ಕಂಡಕ್ಟರ್ ನಬಿಲಾಲ್, ಡ್ರೈವರ್ ಸುಬ್ರಹ್ಮಣಿ ಅವರು ಇಂತಹ ಕಾರ್ಯ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಚಂದಾಪುರದಿಂದ ಹೊರಟ ಬಸ್ ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿ ದಾಖಲಾತಿ ಪತ್ತೆಯಾಗಿದ್ದು, ದಾಖಲಾತಿ ಕಂಡ ತಕ್ಷಣ ಡಿಪೋ ಮ್ಯಾನೇಜರ್’ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ ಸಿಬ್ಬಂದಿಯಿಂದ ತಕ್ಷಣ ದಾಖಲಾತಿ ತರಿಸಿಕೊಂಡ ಮ್ಯಾನೇಜರ್ ಸಂಬಂಧಿಸಿದವರಿಗೆ ಬ್ಯಾಂಕ್ ಮೂಲಕ ಸಂಪರ್ಕಿಸಿ ದಾಖಲಾತಿ ವಾಪಸ್ಸು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.