ದೇಶವನ್ನುದ್ದೇಶಿಸಿ ಕೆಲವೇ ನಿಮಿಷದಲ್ಲಿ ಮಾತಾಡ್ತಾರಂತೆ ಮೋದಿ!

By Web DeskFirst Published Mar 27, 2019, 12:01 PM IST
Highlights

ಕೆಲವೇ ಕ್ಷಣಗಳಲ್ಲಿ ಮೋದಿ ನಿಮ್ಮ ಮುಂದೆ| ಕೆಲವೇ ನಿಮಿಷದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ| ದೇಶಾದ್ಯಂತ ಸಂಚಲನ ಮೂಡಿಸಿದ ಮೋದಿ ಟ್ವೀಟ್

ನವದೆಹಲಿ(ಮಾ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಇನ್ನು ಕೆಲವೇ ಕ್ಷಣಗಳಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಇಂದು ನಾನು 11-30 ರಿಂದ 12-00 ಗಂಟೆಯೊಳಗಾಗಿ ನಾನು ದೇಶವನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂಧು ತಿಳಿಸಿದ್ದಾರೆ.

मेरे प्यारे देशवासियों,

आज सवेरे लगभग 11.45 - 12.00 बजे मैं एक महत्वपूर्ण संदेश लेकर आप के बीच आऊँगा।

I would be addressing the nation at around 11:45 AM - 12.00 noon with an important message.

Do watch the address on television, radio or social media.

— Chowkidar Narendra Modi (@narendramodi)

ಇನ್ನು ಮೋಧಿ ಟ್ವೀಟ್ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಚುನಾವಣೆ ಸಂದರ್ಭದಲ್ಲಿ ಮೋದಿ ಏನು ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ ನ್ನು 20 ಸಾವಿರ ಜನ ಲೆಐಕ್ ಮಾಡಿದ್ದು, 8,500 ರಿಟ್ವೀಟ್ ಮಾಡಿದ್ದಾರೆ. ಅಂತೆಯೇ 5 ಸಾವಿರ ಜನ ಈ ಕುರಿತು ಮಾತನಾಡಿದ್ದಾರೆ.

ಇಂದು ಬೆಳಗ್ಗೆ ಪ್ರಧಾನಿ ಮೋದಿ ಭದ್ರತಾ ಸಮಿತಿ ಸಭೆ ನಡೆಸಿದ್ದು, ಆ ಬಳಿಕ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ. ಮೋದಿ ಅವರ ಈ ಘೋಷಣೆ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.

ಸದ್ಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ, ಕೆಲವೇ ನಿಮಿಷದಲ್ಲಿ ದೇವನ್ನುದ್ದೇಶಿಸಿ ಮಾತನಾಡಲಿದ್ದಾರೆ.

 

click me!