
ನವದೆಹಲಿ (ಮಾ.27): ನಾಳೆಯಿಂದ (ಮಂಗಳವಾರ) ನವರಾತ್ರಿ ಆರಂಭವಾಗಲಿದ್ದು, ಪ್ರಧಾನಿ ಮೋದಿ 9 ದಿವಸಗಳ ಉಪವಾಸ ಆಚರಿಸಲಿದ್ದಾರೆ.
ಪ್ರಧಾನಿ ಮೋದಿ ಕಳೆದ ನಾಲ್ಕು ದಶಕಗಳಿಂದ ನವರಾತ್ರಿಯ 9-ದಿವಸಗಳ ಉಪವಾಸ ಕೈಗೊಳ್ಳುತ್ತಿದ್ದು, ಈ ಬಾರಿಯೂ ಅದನ್ನು ಮುಂದುವರಿಸಲಿದ್ದಾರೆ.
ಉಪವಾಸ ಸಂದರ್ಭದಲ್ಲಿ ಮೋದಿ ಕೇವಲ ಬಿಸಿ ನೀರನ್ನು ಮಾತ್ರ ಸೇವಿಸುತ್ತಾರೆ. 2014ರಲ್ಲಿ ನವರಾತ್ರಿ ಸಂದರ್ಭದಲ್ಲಿ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದರೂ, ತಾನು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದಿರಲಿಲ್ಲ.
ಉತ್ತರ ಭಾರತದಲ್ಲಿ ನಾಳೆಯಿಂದ ಚೈತ್ರ ನವರಾತ್ರಿ ಪ್ರಾರಂಭವಾಗಲಿದ್ದು, 9 ದಿನಗಳ ಕಾಲ ಪೂಜೆ ಪುರಸ್ಕಾರಗಳನ್ನು ನಡೆಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.