ಈ ಬಾರಿ ಮಳೆ ಪ್ರಮಾಣ ಸರಾಸರಿಗಿಂತ ಕಡಿಮೆಯಾಗುವ ಸಾಧ್ಯತೆ

Published : Mar 27, 2017, 02:33 PM ISTUpdated : Apr 11, 2018, 01:01 PM IST
ಈ ಬಾರಿ ಮಳೆ ಪ್ರಮಾಣ ಸರಾಸರಿಗಿಂತ ಕಡಿಮೆಯಾಗುವ ಸಾಧ್ಯತೆ

ಸಾರಾಂಶ

ಈ ಬಾರಿ ಮಳೆ ಪ್ರಮಾಣ ಎಂದಿಗಿಂತ ಕಡಿಮೆಯಾಗಲಿದೆ ಎಂದು ಸ್ಕೈಮ್ಯಾಟ್ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಹೇಳಿದೆ.

ನವದೆಹಲಿ (ಮಾ.27): ಈ ಬಾರಿ ಮಳೆ ಪ್ರಮಾಣ ಎಂದಿಗಿಂತ ಕಡಿಮೆಯಾಗಲಿದೆ ಎಂದು ಸ್ಕೈಮ್ಯಾಟ್ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಹೇಳಿದೆ.

ಮುಂಬರುವ ಮಾನ್ಸೂನ್ ಸೀಸನ್ ನ ಕುರಿತು ಪಟ್ಟಿಯನ್ನು ಇಂದು ಸ್ಕೈಮ್ಯಾಟ್ ಬಿಡುಗಡೆ ಮಾಡಿದ್ದು, ಈ ಬಾರಿ ಮಳೆಯ ಪ್ರಮಾಣ ಶೇ.95 ಕ್ಕಿಂತ ಕಡಿಮೆಯಾಗಲಿದ್ದು , ಜೂನ್ ನಿಂದ ಸೆಪ್ಟೆಂಬರ್ ವರೆಗೆ 887 ಮಿಲಿ ಮೀಟರ್ ನಷ್ಟು ಮಳೆಯಾಗಬಹುದು ಎಂದು ಭವಿಷ್ಯ ನುಡಿದಿದೆ.  

ಭಾರತೀಯ ಹವಾಮಾನ ಇಲಾಖೆ ಮುಂದಿನ ತಿಂಗಳು ಮಾನ್ಸೂನ್ ಪ್ರಮಾಣವನ್ನು ಹೇಳಲಿದೆ. ಮಳೆಗಾಲ ಪ್ರಾರಂಭವಾಗುವುದಕ್ಕೆ ಇನ್ನೂ ಎರಡ್ಮೂರು ತಿಂಗಳು ಬಾಕಿಯಿದ್ದು ಮುಂಚಿತವಾಗಿ ಮಳೆಯ ಪ್ರಮಾಣವನ್ನು ಅಂದಾಜಿಸಲಾಗಿದೆ.  ಇದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನು ಎದುರಿಸಲು ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಇದು ಸಹಾಯಕವಾಗಲಿ ಎಂದು ಕೃಷಿ ಇಲಾಖೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

74 ವರ್ಷದ ದಾಖಲೆ ಮುರಿದ Miss Universe ಸ್ಪರ್ಧೆ! 7 ವರ್ಷದ ಮಗುವಿನ Miss ಪಟ್ಟ ಗೆದ್ದಿದ್ದು ಹೇಗೆ? ಬಿಸಿಬಿಸಿ ಚರ್ಚೆ
ಈ ಕುಟುಂಬದಲ್ಲಿ ಹುಟ್ಟಿದವರ ಮೈಬಣ್ಣವೇ ನೀಲಿ! ತಲೆಮಾರುಗಳಿಂದ ಕಾಡಿದ ವಿಚಿತ್ರ ಕಾಯಿಲೆಯ ಹಿಂದಿದೆ ಆಘಾತಕಾರಿ ಕಾರಣ