ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

By Suvarna Web DeskFirst Published Aug 29, 2017, 5:06 PM IST
Highlights

ಡೋಕ್ಲಾಮ್ ಪ್ರದೇಶದಿಂದ ಚೀನಾ ತಮ್ಮ ಸೇನೆಯನ್ನು ವಾಪಸ್ ತೆಗೆದುಕೊಂಡ ನಂತರ ಭಾರತ ಬ್ರಿಕ್ಸ್ ಶೃಂಗಸಭೆಯಲ್ಲಿ  ಭಾಗವಹಿಸಲು  ಒಪ್ಪಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಶಿಯಾನ್’ಗೆ ಪ್ರಯಾಣ ಬೆಳೆಸಲಿದ್ದು, ಸೆ.3 ರಿಂದ 5 ರವರೆಗೆ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ನವದೆಹಲಿ (ಆ.29): ಡೋಕ್ಲಾಮ್ ಪ್ರದೇಶದಿಂದ ಚೀನಾ ತಮ್ಮ ಸೇನೆಯನ್ನು ವಾಪಸ್ ತೆಗೆದುಕೊಂಡ ನಂತರ ಭಾರತ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು  ಒಪ್ಪಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಶಿಯಾನ್’ಗೆ ಪ್ರಯಾಣ ಬೆಳೆಸಲಿದ್ದು, ಸೆ.3 ರಿಂದ 5 ರವರೆಗೆ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಚೀನಾ ಅಧ್ಯಕ್ಷರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಶಿಯಾನ್’ಗೆ ಪ್ರಯಾಣ ಬೆಳೆಸಲಿದ್ದು, ಸೆ.3 ರಿಂದ 5 ರವರೆಗೆ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯನ್ನು ಮುಗಿಸಿಕೊಂಡು ಮಯನ್ಮಾರ್ ಅಧ್ಯಕ್ಷ ಯು ಹುಟಿನ್ ಕ್ಯಾ ಆಹ್ವಾನದ ಮೇರೆಗೆ ಅಲ್ಲಿಂದ ಮೋದಿಯವರು ಮಯನ್ಮಾರ್’ಗೆ ತೆರಳಲಿದ್ದು ಸೆ. 5 ರಿಂದ 7 ರವರೆಗೆ ಅಲ್ಲಿ ಉಳಿದುಕೊಳ್ಳಲಿದ್ದಾರೆ. ಇದು ಮಯನ್ಮಾರ್’ಗೆ ಮೋದಿಯವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.

  

click me!