
ಬೆಂಗಳೂರು(ಆ.29): ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ನಿಂದ ಎಫ್'ಐಆರ್ ದಾಖಲಾಗಿದೆ.
ಬಿಡಿಎ ಸಿಎ ನಿವೇಶನ ಅಕ್ರಮ ಮಾರಾಟ ಆರೋಪ ಹಿನ್ನಲೆಯಲ್ಲಿ ಬಿಡಿಎ ವೆಲ್'ಫೇರ್ ಅಸೋಸಿಯೇಷನ್ ವತಿಯಿಂದ ಶ್ರೀಚಿಕ್ಕಯ್ಯ ಎಂಬುವವರು ದೂರು ನೀಡಿದ ಹಿನ್ನಲೆಯಲ್ಲಿ ಬಿಎಂಟಿಎಫ್ ದೂರು ದಾಖಲಿಸಿದೆ. ಖಾಸಗಿ ವ್ಯಕ್ತಿಗಳಿಗೆ ನೋಂದಣಿ ಮಾಡಿದ ಹಿನ್ನಲೆಯಲ್ಲಿ ಬೆಟ್ಟೇಗೌಡ, ಮಲ್ಲಣ ಹಾಗೂ ನಿವೇಶನ ಖರೀದಿಸಿದ್ದ ಪಿ.ಉದಯ್ ವಿರುದ್ದವೂ ದೂರು ದಾಖಲಾಗಿದೆ. ಜೊತೆಗೆ ಬಿಡಿಎ ಅಧಿಕಾರಗಳ ವಿರುದ್ಧವೂ ಬಿಎಂಟಿಎಫ್ ದೂರು ದಾಖಲಿಸಿದೆ.
ಬೆಂಗಳೂರಿನ ಜೆ.ಪಿ. ನಗರದ 9ನೇ ಹಂತದಲ್ಲಿ 33 ಎಕರೆ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಬಿಡಿಎ ಬಡಾವಣೆಯಲ್ಲಿ ನಿವೇಶನವನ್ನು ಅಕ್ರಮ ಮಾರಾಟ ಮಾಡಿದ ಆರೋಪ ಬೆಟ್ಟೇಗೌಡ ಅವರ ಮೇಲಿದೆ. ಇವರು ಬಿಡಿಎ ಸಿಎ ಸೈಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.