ಮುಸ್ಲಿಮರ ಒಂದು ಕೈಯಲ್ಲಿ ಕುರಾನ್‌, ಮತ್ತೊಂದರಲ್ಲಿ ಕಂಪ್ಯೂಟರ್‌ ಇರಲಿ: ಮೋದಿ

By Suvarna Web DeskFirst Published Mar 2, 2018, 8:46 AM IST
Highlights

ಮುಸ್ಲಿಮರು ಒಂದು ಕೈಯಲ್ಲಿ ಕುರಾನ್‌ ಹೊಂದಿದ್ದರೆ, ಮತ್ತೊಂದರಲ್ಲಿ ಕಂಪ್ಯೂಟರ್‌ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ನವದೆಹಲಿ: ಮುಸ್ಲಿಮರು ಒಂದು ಕೈಯಲ್ಲಿ ಕುರಾನ್‌ ಹೊಂದಿದ್ದರೆ, ಮತ್ತೊಂದರಲ್ಲಿ ಕಂಪ್ಯೂಟರ್‌ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಜೋರ್ಡಾನ್‌ ದೊರೆ ಎರಡನೇ ಅಬ್ದುಲ್ಲಾ ಭಾಗವಹಿಸಿದ್ದ ಇಸ್ಲಾಮಿಕ್‌ ಪರಂಪರೆ ಕುರಿತ ಸಮಾವೇಶವೊಂದರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಯೋತ್ಪಾದನೆ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ, ಆದರೆ ಯುವಕರನ್ನು ದಾರಿತಪ್ಪಿಸುವ ಮನಸ್ಥಿತಿಗಳ ವಿರುದ್ಧ. ಪ್ರತಿಯೊಂದು ಧರ್ಮವೂ ಮಾನವೀಯ ಮೌಲ್ಯಗಳನ್ನು ಪ್ರವರ್ತಿಸುತ್ತದೆ ಎಂದು ಅವರು ತಿಳಿಸಿದರು.

ಭಾರತ ಪ್ರಪಂಚದ ಎಲ್ಲ ಪ್ರಮುಖ ಧರ್ಮಗಳ ತೊಟ್ಟಿಲು. ಭಾರತೀಯ ಪ್ರಜಾಪ್ರಭುತ್ವ ತಲೆತಲಾಂತರದ ಬಹುತ್ವದ ಆಚರಣೆ. ಯುವಕರು ಇಸ್ಲಾಂನ ಮಾನವೀಯತೆಯೊಂದಿಗೆ ಗುರುತಿಸಿಕೊಳ್ಳಬೇಕು ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಅರ್ಹರಾಗಬೇಕು ಎಂದು ಅವರು ತಿಳಿಸಿದರು.

click me!