ಅಭಿವೃದ್ಧಿಗೆ ಪ್ರಧಾನಿ ಮೋದಿ 6 ಸೂತ್ರಗಳು..!

By Suvarna Web DeskFirst Published Feb 12, 2018, 8:35 AM IST
Highlights

ಭಾರತದ ಶೇ.65 ಜನಸಂಖ್ಯೆಯು 35ರ ವಯೋಮಿತಿಯ ಒಳಗೆ ಇದೆ. ಈ ಯುವಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸಿ ‘ನವ ಭಾರತ’ ಸೃಷ್ಟಿಸಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಇದೇ ವೇಳೆ ಅಭಿವೃದ್ಧಿಗಾಗಿ ಆರು ‘ಆರ್’ಗಳ ಸೂತ್ರವನ್ನು ಮೋದಿ ಹೇಳಿದರು.

ದುಬೈ: ಭಾರತದ ಶೇ.65 ಜನಸಂಖ್ಯೆಯು 35ರ ವಯೋಮಿತಿಯ ಒಳಗೆ ಇದೆ. ಈ ಯುವಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸಿ ‘ನವ ಭಾರತ’ ಸೃಷ್ಟಿಸಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಇದೇ ವೇಳೆ ಅಭಿವೃದ್ಧಿಗಾಗಿ ಆರು ‘ಆರ್’ಗಳ ಸೂತ್ರವನ್ನು ಮೋದಿ ಹೇಳಿದರು.

ಇಲ್ಲಿ ಭಾನುವಾರ ನಡೆದ ವಿಶ್ವ ಸರ್ಕಾರಿ ಶೃಂಗದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ರೆಡ್ಯೂಸ್ (ಕಡಿಮೆ ಬಳಕೆ), ರೀ ಯೂಸ್ ಹಾಗೂ ರೀಸೈಕಲ್ (ಮರುಬಳಕೆ), ರಿಕವರ್ (ಮರುವಶ), ರೀಡಿಸೈನ್ (ಮರು ವಿನ್ಯಾಸ), ರೀ ಮ್ಯಾನುಫ್ಯಾಕ್ಚರ್ (ಮರು ಉತ್ಪಾದನೆ) ಎಂಬುದೇ ಈ 6 ‘ಆರ್’ ಮಂತ್ರಗಳು. ಇವುಗಳು ನಿಮಗೆ ‘ಆನಂದ’ ತರುತ್ತವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

‘ತಂತ್ರಜ್ಞಾನದ ಮೂಲಕ ಇಂದು ಮರುಭೂಮಿಯು ಭಾರಿ ಬದಲಾವಣೆ ಕಂಡಿದೆ. ಇದೊಂದು ಪವಾಡ. ನಾವು ತಂತ್ರ ಜ್ಞಾನವನ್ನು ಬಳಸಿ ಅಭಿವೃದ್ಧಿ ಸಾಧಿಸಬೇಕೇ ವಿನಾ ವಿನಾಶವನ್ನಲ್ಲ. ತಂತ್ರಜ್ಞಾನವು ಜನಸಾಮಾನ್ಯರಿಗೆ ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತದ ಮೂಲಕ ಅನುಕೂಲ ಮಾಡಲಬಲ್ಲದು. ಇ-ಆಡಳಿತದಲ್ಲಿ ಇ ಎಂದರೆ ‘ಎಫೀಶಿಯಂಟ್, ಎಫೆಕ್ಟಿವ್, ಈಸಿ, ಎಂಪವರ್ ಮ್ತತು ಈಕ್ವಿಟಿ’ ಎಂದು ಮೋದಿ ಅಭಿಪ್ರಾಯಪಟ್ಟರು.

click me!