
ನವದೆಹಲಿ: ಹಿಂದುಳಿದ ಜಾತಿಯಲ್ಲಿ ಜನಿಸಿದ ವ್ಯಕ್ತಿ ದೇಶದ ಉನ್ನತ ಹುದ್ದೆಯಲ್ಲಿರುವುದರಿಂದ ತಮ್ಮ ವಿರೋಧಿಗಳು ‘ತೀವ್ರ ಹಿಂಸಾತ್ಮಕ’ ಸ್ವರೂಪ ಪಡೆದುಕೊಳ್ಳುತ್ತಿದ್ದಾರೆ ಮತ್ತು ಬಿಜೆಪಿ ಬಲ ವೃದ್ಧಿಸುತ್ತಿರುವುದರಿಂದ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಬಿಜೆಪಿಯ 38ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷದ ಮುಖಂಡರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿಪಕ್ಷಗಳ ಕೋಪ ಹೆಚ್ಚುತ್ತಿರುವುದನ್ನು ನೀವು ನೋಡಿರಬಹುದು. ಈಗ ಅದು, ಇನ್ನೂ ಹೆಚ್ಚು ಹಿಂಸಾತ್ಮಕವಾಗುತ್ತಿರುವುದನ್ನು ನೋಡಬಹುದು. ನಾವು ಯಾವುದೇ ತಪ್ಪು ಮಾಡಿದ್ದೇವೆ ಎಂಬುದು ಇದಕ್ಕೆ ಕಾರಣವಲ್ಲ. ಬಿಜೆಪಿ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿರುವುದನ್ನು ನಮ್ಮ ವಿರೋಧಿಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ’ ಎಂದು ಮೋದಿ ಹೇಳಿದರು.
‘ಬಡ ತಾಯಿಯ ಮಗ’ ದೇಶದ ಪ್ರಧಾನಿಯಾಗಿರುವುದೂ ತಮ್ಮ ವಿರೋಧಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಬಿಜೆಪಿ ಬಡವರ ಪಕ್ಷವಾಗಿದೆ ಮತ್ತು ಹೆಚ್ಚು ಸಂಖ್ಯೆಯ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಕ್ಷಗಳ ಸಂಸದರು ಇರುವುದು ತಮ್ಮ ವಿರೋಧಿಗಳಿಗೆ ಒಪ್ಪಿಕೊಳ್ಳಲಾಗುತ್ತಿಲ್ಲ ಎಂದು ಇದೇ ವೇಳೆ ಅವರು ತಿಳಿಸಿದರು.
ಭಾರತ ಬಂದ್ ವೇಳೆ 11 ಮಂದಿ ಸಾವಿಗೆ ಕಾರಣವಾದ ಭೀಕರ ಹಿಂಸಾಚಾರ ನಡೆದಿರುವ ಬೆನ್ನಲ್ಲೇ ಮೋದಿ ಈ ಹೇಳಿಕೆ ಮಹತ್ವವನ್ನು ಪಡೆದಿದೆ. ಅವರು ತಮ್ಮ ಆ್ಯಪ್ ಮೂಲಕ ಭಾಷಣ ಮಾಡಿದರು ಮತ್ತು ಪಕ್ಷದ ಪದಾಧಿಕಾರಿಗಳ ಪ್ರಶ್ನೆಗಳಿಗೂ ಉತ್ತರಿಸಿದರು. ನಮೋ ಆ್ಯಪ್ ಮೂಲಕ ಪಕ್ಷದ 734 ಜಿಲ್ಲಾಧ್ಯಕ್ಷರು ಮತ್ತು ಐದು ಲೋಕಸಭಾ ಕಾರ್ಯಕರ್ತರ ಜೊತೆಗೂ ಅವರು ಸಂವಾದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.