
ನವದೆಹಲಿ(ನ. 01): ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ. ದೇಶದ ಪ್ರಗತಿಗೆ ಕರ್ನಾಟಕ ನೀಡಿರುವ ಕೊಡುಗೆಯನ್ನು ಪ್ರಧಾನಿ ತಮ್ಮ ಟ್ವೀಟ್'ನಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಮೋದಿಯವರ ಟ್ವಿಟ್ಟರ್ ಹ್ಯಾಂಡಲ್'ನಲ್ಲಿ ಕನ್ನಡದ ಅಕ್ಷರಗಳಲ್ಲೇ ಶುಭ ಕೋರಿರುವುದು ವಿಶೇಷ.
"ಕರ್ನಾಟಕ ಬಹಳ ಸುಂದರ ರಾಜ್ಯವಾಗಿದ್ದು, ಭಾರತದ ಪ್ರಗತಿಗೆ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯದ ಜನತೆಗೆ ನನ್ನ ಶುಭಾಶಯಗಳು" ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಮೋದಿ ಮಾಡಿದ ಈ ಟ್ವೀಟ್'ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಈ ಸುದ್ದಿ ಬರೆಯುವ ವೇಳೆ ಅವರ ಈ ಟ್ವೀಟು ಸುಮಾರು 3 ಸಾವಿರಕ್ಕಿಂತ ಹೆಚ್ಚು ಲೈಕ್ ಕಂಡಿದೆ ಹಾಗು ಸುಮಾರು 2 ಸಾವಿರದಷ್ಟು ಬಾರಿ ರೀಟ್ವೀಟ್ ಆಗಿದೆ.
ಕನ್ನಡವೇ ಮುಂದು:
ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಅಕೌಂಟ್'ನಿಂದ ಇಂದು ವಿವಿಧ ರಾಜ್ಯಗಳ ಏಕೀಕರಣದ ದಿನಕ್ಕೆ ಶುಭ ಕೋರಿದ್ದಾರೆ. ಕರ್ನಾಟಕ, ಕೇರಳ, ಮಧ್ಯಪ್ರದೇಶ, ಛತ್ತೀಸ್'ಗಢ, ಹರಿಯಾಣ ಮತ್ತು ಪಂಜಾಬ್'ನ ರಾಜ್ಯೋತ್ಸವಗಳಿಗೆ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳಿಗೆ ಅವುಗಳದ್ದೇ ಭಾಷೆಯಲ್ಲಿ ಪ್ರಧಾನಿ ವಿಶ್ ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಮಾಡಿದ ಟ್ವೀಟ್'ಗೆ ಅತೀ ಹೆಚ್ಚು ರೆಸ್ಪಾನ್ಸ್ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.