ಗಡಿ ಸಂರಕ್ಷಣಾ ಆಯೋಗ ರಚಿಸಿ ಮರೆತ ಸರ್ಕಾರ!

Published : Nov 01, 2016, 04:04 AM ISTUpdated : Apr 11, 2018, 01:12 PM IST
ಗಡಿ ಸಂರಕ್ಷಣಾ ಆಯೋಗ ರಚಿಸಿ ಮರೆತ ಸರ್ಕಾರ!

ಸಾರಾಂಶ

ಬೆಳಗಾವಿ ಗಡಿ ವಿಚಾರವಾಗಿ ಮುಂದಿನ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್​'ನಲ್ಲಿ ವಾದ ಮಂಡನೆ ನಡೆಯಲಿದೆ. ಆದರೆ, ಗಡಿ ಹೋರಾಟಕ್ಕೆ ಶಕ್ತಿ ತುಂಬಲಿರುವ ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನ ಬೆಳಗಾವಿಯಲ್ಲಿ ಸ್ಥಾಪಿಸುವ ಭರವಸೆಯನ್ನು ಮಾತ್ರ ಸರ್ಕಾರ ಇನ್ನೂ ಈಡೇರಿಲ್ಲ.

ಬೆಂಗಳೂರು(ನ.01): ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಮಾತಿಗೆ ಬದ್ಧ ಎಂದೇ ಸರ್ಕಾರಗಳು ಹೇಳಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಕರ್ನಾಟಕ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ತೋರಿಸುವಷ್ಟು ಆಸಕ್ತಿ ತೋರಿಸುತ್ತಿಲ್ಲ. ಇದಕ್ಕೊಂದು ಸ್ಪಷ್ಟ ನಿದರ್ಶನವೇ ಗಡಿ ಸಂರಕ್ಷಣಾ ಆಯೋಗವನ್ನ ಬೆಳಗಾವಿಯಲ್ಲಿ ಸ್ಥಾಪಿಸುವ ವಿಚಾರ.

ಬೆಳಗಾವಿ ಗಡಿ ವಿಚಾರವಾಗಿ ಮುಂದಿನ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್​'ನಲ್ಲಿ ವಾದ ಮಂಡನೆ ನಡೆಯಲಿದೆ. ಆದರೆ, ಗಡಿ ಹೋರಾಟಕ್ಕೆ ಶಕ್ತಿ ತುಂಬಲಿರುವ ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನ ಬೆಳಗಾವಿಯಲ್ಲಿ ಸ್ಥಾಪಿಸುವ ಭರವಸೆಯನ್ನು ಮಾತ್ರ ಸರ್ಕಾರ ಇನ್ನೂ ಈಡೇರಿಲ್ಲ.

ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ಗಡಿ ಸಂರಕ್ಷಣಾ ಆಯೋಗವನ್ನು ಸರ್ಕಾರ ರಚಿಸಿತು. ಮೊದಲ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ವಿ.ಎಸ್‌.ಮಳೀಮಠ, ಕೆಲವೊಂದಿಷ್ಟು ಆರೋಗ್ಯಕರ ಚರ್ಚೆ, ಮಹತ್ವದ ಸಭೆಗಳು ಕೂಡ ಬೆಳಗಾವಿಯಲ್ಲಿ ನಡೆದವು. ಮಳೀಮಠ ಕಾಲವಾದ ಬಳಿಕ ಹೊಸದಾಗಿ ಆಯೋಗದ ಅಧ್ಯಕ್ಷರಾಗಿ ರಾಜೇಂದ್ರ ಬಾಬು ಅವರನ್ನು ಸರ್ಕಾರ ನೇಮಕಗೊಳಿಸಿದೆ. ಆದರೆ, ರಾಜೇಂದ್ರ ಬಾಬು ಈವರೆಗೂ ಎಂಇಎಸ್ ಉಪಟಳದ ಬೆಳಗಾವಿಯತ್ತ ಮುಖವನ್ನೇ ಮಾಡಿಲ್ಲ. ಇನ್ನು ಸುಪ್ರೀಂ ಕೋರ್ಟ್‌'ನಲ್ಲಿ ದಾಖಲೆಗಳ ಸಂಗ್ರಹ, ಸಾಕ್ಷಿ ಸಿದ್ಧತೆಯಂತಹ ಕಾರ್ಯಗಳು ನಡೆಯಬೇಕಿದೆ. ಈ ಪ್ರಾದೇಶಿಕ ಕಚೇರಿ ಬೆಳಗಾವಿಯಲ್ಲಿ ಸ್ಥಾಪಿಸುವುದರಿಂದ ಗಡಿ ಹೋರಾಟಕ್ಕೆ ಅನುಕೂಲವಾಗಲಿದೆ ಎನ್ನುವುದು ಕನ್ನಡಿಗರ ಒತ್ತಾಸೆ. ಒಟ್ಟಿನಲ್ಲಿ ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ನಮ್ಮ ಬೆಳಗಾವಿ ಮಹಾರಾಷ್ಟ್ರದ ಪಾಲಾಗುವುದರಲ್ಲಿ ಯಾವುದೇ  ಅನುಮಾನವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜು ಬಂಧನ ಸನ್ನಿಹಿತ: ನಿರೀಕ್ಷಣಾ ಜಾಮೀನು ಅರ್ಜಿ ವಜಾ
ದ್ವೇಷ ಭಾಷಣ ತಡೆ ಕಾಯ್ದೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಲ್ಲ: ಬಿ.ಕೆ.ಹರಿಪ್ರಸಾದ್‌ ಲೇಖನ