ವಾರಣಾಸಿಯಷ್ಟೇ ಕೇರಳವನ್ನು ಪ್ರೀತಿಸುವೆ: ಮೋದಿ!

By Web DeskFirst Published Jun 8, 2019, 5:44 PM IST
Highlights

ಕೇರಳ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ| ಗುರುವಾಯೂರು ದೇವಸ್ಥಾನದಲ್ಲಿ ಹೂವಿನ ತುಲಾಭಾರ| ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ| ಸ್ವಕ್ಷೇತ್ರ ವಾರಣಾಸಿಯಷ್ಟೇ ಕೇರಳವನ್ನೂ ಪ್ರೀತಿಸುವುದಾಗಿ ಹೇಳಿದ ಪ್ರಧಾನಿ| 5 ವರ್ಷಗಳ ಕಾಲ ಜನತೆಯ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದ ಪ್ರಧಾನಿ|

ಗುರುವಾಯೂರು (ಜೂ.08): ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕೇರಳಕ್ಕೆ ಆಗಮಿಸಿರುವ ಪ್ರಧಾನಿ ಮೋದಿ, ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Kerala: Prime Minister Narendra Modi arrives at Sri Krishna Temple in Guruvayur of Thrissur. pic.twitter.com/AaTKpfBlQT

— ANI (@ANI)

ಇಂದು ಬೆಳಗ್ಗೆ ಕೇರಳದ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ದೇವಾಲಯದಲ್ಲಿ ಕಮಲದ ಹೂವಿನ ತುಲಾಭಾರ ಸೇವೆಯಲ್ಲಿ ಭಾಗಿಯಾದರು. 

Kerala: Prime Minister Narendra Modi at Sri Krishna Temple in Guruvayur of Thrissur. pic.twitter.com/hSH2UbMGIy

— ANI (@ANI)

ವಿಶೇಷ ಪೂಜೆ ಬಳಿಕ ಕೇರಳ ಬಿಜೆಪಿ ರಾಜ್ಯ ಘಟಕ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ತಮ್ಮ ಸ್ವಕ್ಷೇತ್ರ ವಾರಣಾಸಿಯಷ್ಟೇ ಕೇರಳವನ್ನೂ ಪ್ರೀತಿಸುವುದಾಗಿ ಹೇಳಿದರು.

PM Narendra Modi: We believe that elections have a place of their own but after elections the more important responsibility is towards the 130 crore citizens. Those who made us win our ours, those who did not make us win are also ours. Kerala is as much mine as is Varanasi. https://t.co/KgSKCuJWT0

— ANI (@ANI)

ಉಡುಪಿ, ಗುರುವಾಯೂರು ಹಾಗೂ ದ್ವಾರಕಾದೊಂದಿಗೆ ಗುಜರಾತ್ ಜನತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.  ದ್ವಾರಕಾದೀಶ ಮತ್ತು ಕೃಷ್ಣನೊಂದಿಗೆ ಗುಜರಾತ್ ಜನತೆ ಧಾರ್ಮಿಕ ಮತ್ತು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಮೋದಿ ನುಡಿದರು.

PM Narendra Modi in Guruvayur, Kerala: Be it Udupi, Guruvayur or Dwarkadhish, for us - the people of Gujarat, there is an emotional connect. Coming from Gujarat, the land of Dwarkadhish, to Guruvayur gives one a special feeling. pic.twitter.com/mAq2uedCxQ

— ANI (@ANI)

ಚುನಾವಣೆಯಲ್ಲಿ ಬಿಜೆಪಿಯನ್ನು ಜನತೆ ಸೇವೆ ಮಾಡಲು ಆರಿಸಿದ್ದು, ಮುಂದಿನ 5 ವರ್ಷಗಳ ಕಾಲ ತಾವು ಜನತೆಯ ಸೇವಕರಾಗಿ ಕೆಲಸ ಮಾಡುವುದಾಗಿ ಪ್ರಧಾನಿ ಹೇಳಿದರು.

"

click me!