ಅಧ್ಯಕ್ಷ ಸ್ಥಾನ ಬಿಟ್ಕೊಡಿ: ರಾಹುಲ್’ಗೆ ಮಾಜಿ ಒಲಂಪಿಕ್ ಆಟಗಾರನ ಆಗ್ರಹ!

By Web DeskFirst Published Jun 8, 2019, 4:48 PM IST
Highlights

‘ನೀವು ಬಿಟ್ಟರೆ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗುವೆ’| ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸುವಂತೆ ರಾಹುಲ್ ಗೆ ಮಾಜಿ ಒಲಂಪಿಕ್ ಆಟಗಾರನ ಆಗ್ರಹ| ರಾಹುಲ್ ಗಾಂಧಿಗೆ ಪತ್ರ ಬರೆದ ಮಾಜಿ ಕೇಂದ್ರ ಸಚಿವ ಅಸ್ಲಮ್ ಶೇರ್ ಖಾನ್| ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲು ಸಿದ್ಧ ಎಂದ ಅಸ್ಲಮ್ ಶೇರ್ ಖಾನ್| ಪಕ್ಷವನ್ನು ಮತ್ತೆ ಬೇರುಮಟ್ಟದಿಂದ ಕಟ್ಟುವ ಇರಾದೆ|  

ನವದೆಹಲಿ(ಜೂ.08): ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹುದ್ದೆ ತ್ಯಜಿಸಬೇಕು ಎಂದು ಮಾಜಿ ಒಲಂಪಿಕ್ ಆಟಗಾರ ಮತ್ತು ಮಾಜಿ ಕೇಂದ್ರ ಸಚಿವ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೆಹರೂ-ಗಾಂಧಿ ಪರಿವಾರದ ಹೊರತಾದ ವ್ಯಕ್ತಿಗೆ ನೀಡುವುದಕ್ಕೆ ಇದು ಸೂಕ್ತ ಸಮಯ ಎಂದು ಮಾಜಿ ಒಲಂಪಿಕ್ ಆಟಗಾರ ಮತ್ತು ಮಾಜಿ ಕೇಂದ್ರ ಸಚಿವ ಅಸ್ಲಮ್ ಶೇರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

Aslam Sher Khan, ex-union minister&hockey Olympian on his letter to Rahul Gandhi: I wrote when Congress lost elections once again. When Rahul Gandhi said he wants to step down&wants someone else, someone not from his family, to take the charge I thought there's an opportunity. pic.twitter.com/opsE6gxlhy

— ANI (@ANI)

ಈ ಕುರಿತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಅಸ್ಲಮ್ ಶೇರ್ ಖಾನ್, ಒಂದು ವೇಳೆ ರಾಹುಲ್ ಹುದ್ದೆ ತ್ಯಜಿಸುವುದಾದರೆ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ತಾವು ಹೊರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪಕ್ಷವನ್ನು ಮತ್ತೆ ಬೇರು ಮಟ್ಟದಿಂದ ಕಟ್ಟಬೇಕಾದ ಅವಶ್ಯಕತೆ ಇದ್ದು, ಇದಕ್ಕಾಗಿ ತಾವು ಪಕ್ಷದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ಸಿದ್ಧ ಎಂದಿರುವ ಅಸ್ಲಮ್, ಪತ್ರ ಬರೆದಿರುವ ಹಿಂದೆ ವೈಯಕ್ತಿಕ ಲಾಭದ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

click me!