ಉಗ್ರರ ದಮನಕ್ಕೆ ಭಾರತಕ್ಕೆ ಸಹಕಾರ: ಸೌದಿ

By Web DeskFirst Published Feb 21, 2019, 11:00 AM IST
Highlights

ಉಗ್ರರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವವರನ್ನು ದಂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರೂ, ಅದನ್ನು ಬೆಂಬಲಿಸುವ ಕುರಿತಂತೆ ರಾಜಕುಮಾರ ಮೌನವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ನವದೆಹಲಿ[ಫೆ.21]: ಭಯೋತ್ಪಾದನೆ ಹಾಗೂ ತೀವ್ರಗಾಮಿತನ ಸರ್ವವ್ಯಾಪಿಯಾಗಿದ್ದು, ಇವುಗಳನ್ನು ಎದುರಿಸಲು ಭಾರತ ಹಾಗೂ ನೆರೆ ದೇಶಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭರವಸೆ ನೀಡಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕನೊಬ್ಬ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆಸಿ ಮಂಡ್ಯದ ಗುರು ಸೇರಿ 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಘಟನೆಯ ಬೆನ್ನಲ್ಲೇ ಸೌದಿ ರಾಜಕುಮಾರನ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಭಾರತದಲ್ಲಿ ಸೌದಿ ರಾಜಕುಮಾರ: ಮೋದಿ ಮಾತುಕತೆ ನೇರಾನೇರ!

ಆದರೆ, ಉಗ್ರರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವವರನ್ನು ದಂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರೂ, ಅದನ್ನು ಬೆಂಬಲಿಸುವ ಕುರಿತಂತೆ ರಾಜಕುಮಾರ ಮೌನವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಪಾಕಿಸ್ತಾನ ಪ್ರವಾಸ ಮುಗಿಸಿ ಮಂಗಳವಾರ ರಾತ್ರಿ ಭಾರತಕ್ಕೆ ಆಗಮಿಸಿದ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಬುಧವಾರ ಮೋದಿ ಜತೆ ವಿಸ್ತೃತ ಮಾತುಕತೆ ನಡೆಸಿದರು. ವ್ಯಾಪಾರ ಹಾಗೂ ಹೂಡಿಕೆ ವಲಯಗಳಲ್ಲಿ ಸಹಕಾರ ವೃದ್ಧಿಸುವುದಕ್ಕೆ ಸಂಬಂಧಿಸಿದಂತೆ 5 ಒಪ್ಪಂದಗಳಿಗೆ ಇದೇ ವೇಳೆ ಎರಡೂ ದೇಶಗಳು ಸಹಿ ಹಾಕಿದವು.

‘ಜನರ ಬೆಂಬಲದಿಂದ ಸೈನಿಕರಲ್ಲಿ ಕಿಚ್ಚು ಹೆಚ್ಚಿದೆ’

ಮಾತುಕತೆ ಬಳಿಕ ಮಾಧ್ಯಮ ಹೇಳಿಕೆಯೊಂದನ್ನು ಸೌದಿ ರಾಜಕುಮಾರ ಬಿಡುಗಡೆ ಮಾಡಿದ್ದಾರೆ. ಭಯೋತ್ಪಾದನೆ ಹಾಗೂ ತೀವ್ರಗಾಮಿತನಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಎಲ್ಲ ಸಹಕಾರ ನೀಡುತ್ತೇವೆ. ಅದು ಗುಪ್ತಚರ ಮಾಹಿತಿ ವಿನಿಮಯ ಕೂಡ ಆಗಿರಬಹುದು. ಆದರೆ ಭಾರತವೊಂದರ ಜತೆಗೇ ಅಲ್ಲ, ನೆರೆ ದೇಶಗಳಿಗೂ ಸಹಾಯ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಮೋದಿ ಕೂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿ ಉಗ್ರವಾದ ಪಿಡುಗಿನ ಕ್ರೂರ ಸಂಕೇತ. ಭಯೋತ್ಪಾದಕರು ಹಾಗೂ ಅವರ ಹಿಂದಿರುವವರಿಗೆ ಶಾಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಸೌದಿ ರಾಜಕುಮಾರ ಈ ಬಗ್ಗೆ ಏನನ್ನೂ ಹೇಳಿಲ್ಲ.

click me!