
ನವದೆಹಲಿ: ಎನ್'ಡಿಎ ಸರಕಾರ 3 ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ಅತಿದೊಡ್ಡ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಅರುಣಾಚಲಪ್ರದೇಶದ ಲೋಹಿತ್ ನದಿ ಮೇಲೆ ನೂತನವಾಗಿ ನಿರ್ಮಿಸಿದ ಧೋಲಾ-ಸಾದಿಯಾ ಸೇತುವೆಯನ್ನು ಮೋದಿ ಶುಕ್ರವಾರ ಉದ್ಘಾಟಿಸಿದರು.
ದೇಶದಲ್ಲಿ ಕೈಗೊಳ್ಳಲಾದ ಅತ್ಯಂತ ಪ್ರಮುಖ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಈ ಸೇತುವೆಯೂ ಒಂದು ಎಂದು ಮೋದಿ ಬಣ್ಣಿಸಿದ್ದಾರೆ.
ಧೋಲಾ-ಸಾದಿಯಾ ಸೇತುವೆ ವೈಶಿಷ್ಟ್ಯವೇನು?
* ಬ್ರಹ್ಮಪುತ್ರ ನದಿಯ ಉಪನದಿಯಾಗಿರುವ ಲೋಹಿತ್ ನದಿಯ ಮೇಲೆ ನಿರ್ಮಿಸಲಾಗಿದೆ.
* 9.15 ಕಿಮೀ ಉದ್ದವಿರುವ ಈ ಸೇತುವೆಯಲ್ಲಿ ತ್ರಿಪಥ ರಸ್ತೆ ಇದೆ
* ಯೋಜನೆಗೆ ತಗುಲಿದ ಒಟ್ಟು ವೆಚ್ಚ 2,056 ಕೋಟಿ ರೂ.
* ಮುಂಬೈನ ಬಾಂದ್ರಾ-ವೋರ್ಲಿ ಸೇತುವೆಗಿಂತ(5.6 ಕಿಮೀ) ಮುಕ್ಕಾಲು ಪಾಲು ದೊಡ್ಡದು ಇದು
* ಅಸ್ಸಾಮ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಗೆ ಇದು ಕೊಂಡಿ
* ಅಸ್ಸಾಮ್'ನ ಧೋಲಾ ಮತ್ತು ಅರುಣಾಚಲದ ಸಾದಿಯಾಗೆ ಇದು ಕನೆಕ್ಟ್ ಆಗುತ್ತದೆ.
* ಈ ಸೇತುವೆಯಿಂದಾಗಿ ಎರಡೂ ರಾಜ್ಯಗಳ ನಡುವಿನ ಪ್ರಯಾಣದ ಅವಧಿ 4 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.
* ಸೇನಾ ಸಾಮಗ್ರಿಗಳ ಸಾಗಣೆಗೆ ಈ ಸೇತುವೆ ಬಹಳ ನೆರವಾಗುತ್ತದೆ
* 60 ಟನ್'ಗಳಷ್ಟು ತೂಕದ ಸೇನಾ ಟ್ಯಾಂಕ್'ನ ಸಾಗಣೆಯನ್ನು ಈ ಸೇತುವೆ ಹೊರಬಲ್ಲುದು.
* ಚೀನಾದ ಗಡಿ ಬಳಿ ಇರುವ ದಿಬಾಂಗ್ ಮತ್ತು ಅಂಜಾ ಎಂಬ ಪ್ರದೇಶಗಳನ್ನು ತಲುಪಲು ಈ ಮುಂಚೆ 2 ದಿನ ತಗುಲುತ್ತಿತ್ತು. ಈಗ ಈ ಸಮಯ ಸಾಕಷ್ಟು ಕಡಿಮೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.