
ನವದೆಹಲಿ(ಮೇ.27): ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿ-ಮಿರಟ್ ಮತ್ತು ಈಸ್ಟರ್ನ್ ಪೆರಿಫರೆಲ್ ಎಕ್ಸಪ್ರೆಸ್ ವೇಯನ್ನು ದೇಶಕ್ಕೆ ಸಮರ್ಪಿಸಿದರು. ದೆಹಲಿ-ಮಿರಟ್ ಹೈವೇ ದೇಶದ ಮೊದಲ 14 ಲೇನ್ ಹೆದ್ದಾರಿಯಾಗಿದ್ದು, ಸುಮಾರು 7.500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ದೆಹಲಿ-ಮಿರಟ್ ಹೆದ್ದಾರಿಗೆ ತೆರೆದ ವಾಹನದಲ್ಲಿ ಬಂದ ಪ್ರಧಾನಿ ಹೆದ್ದಾರಿಯನ್ನು ಉದ್ಘಾಟಿಸಿದರು. ತೆರೆದ ವಾಹನದಲ್ಲಿ ಸುಮಾರು 8 ಕಿ.ಮೀ ರೋಡ್ ಶೋ ನಡೆಸಿದ ಮೋದಿ, ರಸ್ತೆ ಲೋಕಾರ್ಪಣೆ ಮಾಡಿದರು. ರಸ್ತೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಮೋದಿಯತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ಈ ಹಿಂದಿನ 32 ಸಿಗ್ನಲ್ ಉಳ್ಳ ಹಳೆಯ ಹೆದ್ದಾರಿ ಬದಲಾಗಿ ಇನ್ಮುಂದೆ ಈ ನೂತನ ಹೆದ್ದಾರಿ ಬಳಸಬಹುದಾಗಿದೆ. ಇದರಿಂದ ಇಂಧನ ಮತ್ತು ಸಮಯದ ಉಳಿತಾಯ ಸಾಧ್ಯ.
ಇನ್ನು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈಸ್ಟರ್ನ್ ಪೆರಿಫರೆಲ್ ರಸ್ತೆ ಕೂಡ ಉದ್ಘಾಟನೆಗೆ ಸಿದ್ದವಾಗಿದೆ. ಈ ಎರಡೂ ಹೆದ್ದಾರಿಗಳು ಪರಿಸರ ಸ್ನೇಹಿಯಾಗಿದ್ದು, ಮಾರ್ಚ್ 2019 ರಲ್ಲಿ ಯೋಜನೆ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಸಿದ್ದವಾಗುತ್ತವೆ. ದೆಹಲಿ-ಮಿರಟ್ ಹೈವೇಯನ್ನು ಮಾಲಿನ್ಯದಿಂದ ಮುಕ್ತಿ ರಸ್ತೆ ಎಂದು ಬಣ್ಣಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.