
ನವದೆಹಲಿ (ಮಾ.16): ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭಾ ಪ್ರಶ್ನೋತ್ತರ ವೇಳೆ ಆಗಮಿಸಿದಾಗ, 'ನೋಡಿ ನೋಡಿ ಯಾರು ಬಂದರು' ಅಂತ ಪ್ರತಿಪಕ್ಷಗಳು ಅಣಕಿಸಿದಾಗ ಭಾರತದ ಸಿಂಹ ಆಗಮಿಸಿದೆ ಎಂದು ಬಿಜೆಪಿಯವರು ಕೂಗಿದ ಸ್ವಾರಸ್ಯಕರ ಘಟನೆಗೆ ರಾಜ್ಯಸಭೆ ಇಂದು ಸಾಕ್ಷಿಯಾಯಿತು.
ಪ್ರಧಾನ ಮಂತ್ರಿ ಹಾಗೂ ಅವರ ಕಚೇರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪ್ರತಿ ಗುರುವಾರ ಕೇಳಲಾಗುತ್ತದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ರಾಜ್ಯಸಭೆಯಲ್ಲಿ ಮೊದಲ ಬಾರಿ ಪ್ರಧಾನಿ ಕಾಣಿಸಿಕೊಂಡರು. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಸಂಸದರು ಕೇಳಿದ ಪ್ರಶ್ನೆಗಳನ್ನು ಆಲಿಸಿದರು. 15 ನಿಮಿಷಕ್ಕೂ ಹೆಚ್ಚು ಹೊತ್ತು ಅಲ್ಲಿರದೇ ನಿರ್ಗಮಿಸಿದರು.
ಬಳಿಕ ಕಾಂಗ್ರೆಸ್ ಸಂಸದರು ಮತ್ತು ಬಿಜೆಪಿ ಸಂಸದರ ನಡುವೆ ಮಾತಿನ ಚಕಮಕಿ ಹೆಚ್ಚಾಯಿತು. ರಾಜ್ಯಸಭಾ ಉಪಾಧ್ಯಕ್ಷ ಪಿ ಜೆ ಕುರಿಯನ್ ಅವರನ್ನು ಸಮಾಧಾನಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.