ರೈತರಿಗೆ ಶುಭ ಸುದ್ದಿ : ಮೋದಿ ಸರ್ಕಾರದಿಂದ ಭರ್ಜರಿ ಬೆಂಬಲ ಬೆಲೆ..?

First Published Jul 2, 2018, 11:00 AM IST
Highlights

ಮುಂಗಾರು ಬೆಳೆಗಳ ಪೈಕಿ ಅತ್ಯಂತ ಪ್ರಮುಖವಾದ ಭತ್ತಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಕ್ವಿಂಟಾಲ್‌ಗೆ 1750 ರು. ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಸಾಧ್ಯತೆ ಇದೆ. 

ನವದೆಹಲಿ: ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚದ ಶೇ. 150 ರಷ್ಟು ಕನಿಷ್ಠ ಬೆಂಬಲ ಬೆಲೆ ಘೋಷಿಸುವುದಾಗಿ ಪ್ರಧಾನಿ ನರೇಂದ್ರ  ಮೋದಿ ಇತ್ತೀಚೆಗೆ ತಮ್ಮನ್ನು ಭೇಟಿಯಾಗಿದ್ದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರೈತ ಪ್ರತಿನಿಧಿಗಳಿಗೆ ಭರವಸೆ ನೀಡಿದ್ದರು. ಮೂಲಗಳ ಪ್ರಕಾರ ಮುಂಗಾರು ಬೆಳೆಗಳ ಪೈಕಿ ಅತ್ಯಂತ ಪ್ರಮುಖವಾದ ಭತ್ತಕ್ಕೆ ಕ್ವಿಂಟಾಲ್‌ಗೆ 1750 ರು. ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಸಾಧ್ಯತೆ ಇದೆ. 

2018 - 19 ರ ಸಾಲಿಗೆ ಘೋಷಿಸಲಾಗುವ ಈ ಕನಿಷ್ಠ ಬೆಂಬಲ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಏರಿಕೆಯಾಗಲಿದೆ. ಉಳಿದಂತೆ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುವ ಇತರೆ 13 ಬೆಳೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಕನಿಷ್ಠಬೆಂಬಲ ಬೆಲೆ ಘೋಷಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. 

ಭತ್ತಕ್ಕೆ ಶೇ.13ರಷ್ಟು ಏರಿಕ ಲೆಕ್ಕಹಾಕಿದರೆ ಅದು ಕ್ವಿಂಟಾಲ್‌ಗೆ 200 ರು.ವರೆಗೆ ಏರಿಕೆಯಾಗಲಿದೆ. ಹಾಲಿ ಸಾಮಾನ್ಯ ದರ್ಜೆಯ ಭತ್ತಕ್ಕೆ  ಕ್ವಿಂಟಾಲ್‌ಗೆ 1 550 ರು., ಉತ್ತಮ ಗುಣಮಟ್ಟದ ಭತ್ತಕ್ಕೆ 1590 ರು. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.

click me!