ಲೆನಿನ್, ಅಂಬೇಡ್ಕರ್ ಪ್ರತಿಮೆ ಧ್ವಂಸ ರಾಜಕೀಯ; ಮೋದಿ ತೀವ್ರ ಖಂಡನೆ

By Suvarna Web DeskFirst Published Mar 7, 2018, 4:15 PM IST
Highlights

ತ್ರಿಪುರಾ, ಮೀರತ್’ನಲ್ಲಿ ನಡೆದ ಲೆನಿನ್, ಅಂಬೇಡ್ಕರ್ ಪ್ರತಿಮೆ ಧ್ವಂಸ ರಾಜಕೀಯವನ್ನು ಪ್ರಧಾನಿ ನರೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. 

ನವದೆಹಲಿ (ಮಾ. 07): ತ್ರಿಪುರಾ, ಮೀರತ್’ನಲ್ಲಿ ನಡೆದ ಲೆನಿನ್, ಅಂಬೇಡ್ಕರ್ ಪ್ರತಿಮೆ ಧ್ವಂಸ ರಾಜಕೀಯವನ್ನು ಪ್ರಧಾನಿ ನರೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. 

ಈ ಬಗ್ಗೆ ಮೋದಿ ಗೃಹ ಸಚಿವ ರಾಜನಾಥ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದು ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.  ಗೃಹ ಸಚಿವಾಲಯವು ಆಯಾ ರಾಜ್ಯಗಳ ಜೊತೆ ಮಾತುಕತೆ ನಡೆಸಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ತ್ರಿಪುರಾ, ತಮಿಳುನಾಡು ಬಿಜೆಪಿ ಘಟಕದ ಜೊತೆ ಮಾತನಾಡಿದ್ದೇನೆ. ಪ್ರತಿಮೆ ಧ್ವಂಸ ಕೃತ್ಯದಲ್ಲಿ ಬಿಜೆಪಿಯವರ ಯಾರಾದರೂ ಭಾಗಿಯಾಗಿದ್ದರೆ ಪಕ್ಷ ಅಂತವರ ಮೇಲೆ ಕ್ರಮ ಕೈಗೊಳ್ಳುತ್ತದೆ. 
 

click me!