ನಡುಗಿತು ಜೈಪುರ: ಠಾಣೆ ಎದುರು ಧರಣಿ ಕುಳಿತ ಮೋದಿ ಸಹೋದರ!

Published : May 15, 2019, 12:09 PM IST
ನಡುಗಿತು ಜೈಪುರ: ಠಾಣೆ ಎದುರು ಧರಣಿ ಕುಳಿತ ಮೋದಿ ಸಹೋದರ!

ಸಾರಾಂಶ

ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಧರಣಿ| ಪೊಲೀಸ್ ಠಾಣೆ ಎದುರಲ್ಲೇ ಧರಣಿ ಕುಳಿತ ಪ್ರಹ್ಲಾದ್ ಮೋದಿ| ತಮ್ಮ ರಕ್ಷಣೆಗಿರುವ ಪೊಲೀಸರಿಗೆ ಪ್ರತ್ಯೇಕ ವಾಹನ ನೀಡುವಂತೆ ಆಗ್ರಹ| ಜೈಪುರ್ ಪೊಲೀಸ್ ಕಮಿಷನರ್ ಮನವಿ ಮೇರೆಗೆ ಧರಣಿ ಕೈಬಿಟ್ಟ ಪ್ರಹ್ಲಾದ್ ಮೋದಿ| 

ಜೈಪುರ(ಮೇ.15): ತಮ್ಮ ರಕ್ಷಣೆಗಿರುವ ಪೊಲೀಸರಿಗೆ ಪ್ರತ್ಯೇಕ ವಾಹನ ನೀಡುವಂತೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಜೈಪುರದಿಂದ ತೆರಳುತ್ತಿದ್ದ ಪ್ರಹ್ಲಾದ್ ಮೋದಿ ಅವರ ರಕ್ಷಣೆಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಅವರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡದೇ, ಪ್ರಹ್ಲಾದ್ ಮೋದಿ ಅವರ ವಾಹನದಲ್ಲೇ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು.

ಇದರಿಂದ ಕೆರಳಿದ ಪ್ರಹ್ಲಾದ್ ಮೋದಿ, ಬೆಂಗಾವಲು ವಾಹನ ನೀಡುವಂತೆ ಬಾಗ್ರು ಪೊಲೀಸ್ ಠಾಣೆ ಎದುರಲ್ಲಿ ಧರಣಿ ನಡೆಸಿದರು. ಬಳಿಕ ನಿಯಮದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ವಿಐಪಿ ಕಾರಿನಲ್ಲೇ ಕಳುಹಿಸಬೇಕಾದ ಅನಿವಾರ್ಯತೆನ್ನು ಜೈಪುರ್ ಪೊಲೀಸ್ ಕಮಿಷನರ್ ಆನಂದ್ ಶ್ರೀವಾತ್ಸವ್ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪೊಲೀಸ್ ಕಮಿಷನರ್ ಭರವಸೆ ಬಳಿಕ ಧರಣಿ ಕೈಬಿಟ್ಟ ಪ್ರಹ್ಲಾದ್ ಮೋದಿ ಬಳಿಕ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ತಮ್ಮದೇ ಕಾರಿನಲ್ಲಿ ತೆರಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ