ಶೀಘ್ರವೇ ಭಾರತ ಸೇನೆಯ ಸಮವಸ್ತ್ರ ಬದಲು?

By Web DeskFirst Published May 15, 2019, 10:44 AM IST
Highlights

ಶೀಘ್ರವೇ ಭಾರತ ಸೇನೆಯ ಸಮವಸ್ತ್ರ ಬದಲು?| ಎದುರಾಳಿ ಸೈನಿಕರಿಗೆ ಗುರುತು ಸಿಗದಂತೆ ತಡೆಯಲು ಈ ಕ್ರಮ| ಭದ್ರತೆ ಸೇರಿ ಇನ್ನಿತರ ಕಾರಣಗಳಿಗಾಗಿ ಸಮವಸ್ತ್ರ ಬದಲಿಗೆ ಚಿಂತನೆ

ನವದೆಹಲಿ[ಮೇ.15]: ಭಾರತೀಯ ಸೇನೆಯ ಯೋಧರ ಸಮವಸ್ತ್ರಗಳಲ್ಲಿ ಕೆಲ ಬದಲಾವಣೆಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಶತ್ರು ಸೈನಿಕರಿಗೆ ಗುರುತಿಸಲು ಸಾಧ್ಯವಾಗದಂತೆ ತಡೆಯಲು ಹಾಗೂ ಭದ್ರತಾ ಕಾರಣ ಸೇರಿದಂತೆ ಇತರ ಕಾರಣಗಳಿಗಾಗಿ ಯೋಧರ ಸಮವಸ್ತ್ರ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಯೋಧರ ಸಮವಸ್ತ್ರದಲ್ಲಿ ಆಗಬೇಕಾದ ಬದಲಾವಣೆ ಸಂಬಂಧ ನಡೆದ ಮಾತುಕತೆ ವೇಳೆ ಕೆಲವು ಸಲಹೆಗಳನ್ನು ಅಧಿಕಾರಿಗಳು ನೀಡಿದ್ದು, ಅವುಗಳ ಬಗ್ಗೆ ಪರಾಮರ್ಶೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಸೇನೆಯಲ್ಲಿ ಯೋಧರಿಗೆ ಅವರ ರಾರ‍ಯಂಕ್‌, ಅವರ ರೆಜಿಮೆಂಟ್‌ ಅನ್ನು ಗುರುತಿಸಲು ಸಮವಸ್ತ್ರದ ಭುಜದ ಮೇಲೆ ಅಳವಡಿಸಲಾಗುವ ಬ್ಯಾಡ್ಜ್‌ಗಳನ್ನು ಯೋಧನ ಸಮವಸ್ತ್ರದ ಎದೆಯ ಮೇಲಿರಬೇಕು ಸೇರಿದಂತೆ ಇನ್ನಿತರ ಸಲಹೆಗಳು ಬಂದಿವೆ.

ಅಮೆರಿಕ, ಬ್ರಿಟನ್‌ ಹಾಗೂ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ಯೋಧರ ಸಮವಸ್ತ್ರಗಳಲ್ಲಿ ಯೋಧರ ರಾರ‍ಯಂಕ್‌ ಹಾಗೂ ಅವರ ರೆಜಿಮೆಂಟ್‌ ಸಂಬಂಧಿಸಿದ ಬ್ಯಾಡ್ಜ್‌ಗಳು ಭುಜದ ಬದಲಿಗೆ ಎದೆಯ ಮೇಲೆಯೇ ಇರುತ್ತವೆ. ದಿನ ನಿತ್ಯ ಕೆಲಸ ಸೇರಿದಂತೆ ಬೇರೆ-ಬೇರೆ ಕೆಲಸಕ್ಕೆ ನಿಯೋಜನೆಯಾಗುವ ಸೇನಾ ಯೋಧರಿಗೆ ಆಯಾ ಕೆಲಸಕ್ಕೆ ಅನುಗುಣವಾಗುವ ಸಮವಸ್ತ್ರ ನೀಡಲು ಭಾರತದ ಸೇನೆ ಬಳಿ ಈಗಾಗಲೇ 8 ಮಾದರಿಯ ಸಮವಸ್ತ್ರಗಳಿವೆ.

click me!