ರಷ್ಯಾದಲ್ಲಿ ಭಾರತದ ಪ್ರಧಾನಿ: ಇಮ್ರಾನ್‌ಗೆ ಅನಾಹುತದ ಗುಮಾನಿ!

Published : Sep 04, 2019, 12:26 PM IST
ರಷ್ಯಾದಲ್ಲಿ ಭಾರತದ ಪ್ರಧಾನಿ: ಇಮ್ರಾನ್‌ಗೆ ಅನಾಹುತದ ಗುಮಾನಿ!

ಸಾರಾಂಶ

ಪ್ರಧಾನಿ ಮೋದಿ 3 ದಿನಗಳ ರಷ್ಯಾ ಪ್ರವಾಸ ಆರಂಭ| ರಷ್ಯಾ ರಾಜಧಾನಿ ಮಾಸ್ಕೋಗೆ ಬಂದಿಳಿದ ಪ್ರಧಾನಿ ಮೋದಿ| ಭಾರತದ ಪ್ರಧಾನಿಗೆ ರಷ್ಯಾದಲ್ಲಿ ಅದ್ದೂರಿ ಸ್ವಾಗತ| ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋಧಿ| 5ನೇ ಪೂರ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ| ಮೋದಿ ರಷ್ಯಾ ಭೇಟಿಯಿಂದಾಗಿ ಕಸಿವಿಸಿಗೊಂಡ ಪಾಕಿಸ್ತಾನ|

ಮಾಸ್ಕೋ(ಸೆ.04):ಪ್ರಧಾನಿ ನರೇಂದ್ರ ಮೋದಿ 3 ದಿನಗಳ ರಷ್ಯಾ ಪ್ರವಾಸದಲ್ಲಿದ್ದು, ರಾಜಧಾನಿ ಮಾಸ್ಕೋಗೆ ಬಂದಿಳಿದ ಭಾರತದ ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಮಾಸ್ಕೋದ ವ್ಲಾಡಿವೋಸ್ಟಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ರಷ್ಯಾ ಸೇನೆ ಗಾರ್ಡ್ ಆಫ್ ಹಾನರ್ ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತ ನೀಡಿತು.

ಒಟ್ಟು ಮೂರು ದಿನಗಳ ಕಾಲದ ಪ್ರವಾಸದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ರಕ್ಷಣೆ, ವ್ಯಾಪಾರ ಸಂಬಂಧ, ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳ ಕುರಿತು ಉಭಯ ನಾಯಕರು ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. 

ಬಳಿಕ 5ನೇ ಪೂರ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ, ಇತರೆ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

 

ತಮ್ಮ ಭೇಟಿಯ ಮೊದಲ ದಿನವೇ ಪ್ರಧಾನಿ ಮೋದಿ ರಷ್ಯಾದಲ್ಲಿರುವ ಭಾರತೀಯ ಸಂಜಾತರೊಂದಿಗೆ ಮಾತುಕಲತೆ ನಡೆಸಿದ್ದು ವಿಶೇಷವಾಗಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ, ಭಾರತದ ನಿರ್ಣಯವನ್ನು ಬಹಿರಂಗವಾಗಿ ಬೆಂಬಲಿಸಿದ್ದ ಮೊದಲ ರಾಷ್ಟ್ರ ರಷ್ಯಾ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಷ್ಯಾ ಭೇಟಿಯಿಂದಾಗಿ ಪಾಕಿಸ್ತಾನ ಕಸಿವಿಸಿಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ