
ಉತ್ತರ ಕೊರಿಯಾ ಸುಪ್ರೀಂ ಲೀಡರ್ ಕಿಮ್-ಜಾಂಗ್-ಉನ್ ಭ್ರಷ್ಟಅಧಿಕಾರಿಗಳಿಗೆ ಯಾವ ರೀತಿಯ ಶಿಕ್ಷೆ ನೀಡುತ್ತಿದ್ದಾರೆ ನೋಡಿ ಎಂದು ಒಕ್ಕಣೆ ಬರೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಕಿಮ್ ವ್ಯಕ್ತಿಯೊಬ್ಬರೊಂದಿಗೆ ಸ್ವಲ್ಪ ದೂರ ನಡೆದು ಹೋಗುತ್ತಾರೆ. ಆಗ ತತಕ್ಷಣ ಆ ವ್ಯಕ್ತಿ ನಿಂತಿರುವ ಜಾಗದಲ್ಲಿ ಸ್ವಯಂಪ್ರೇರಿತವಾಗಿ ಬಾಗಿಲು ತೆರೆದು ವ್ಯಕ್ತಿ ಗುಂಡಿಯೊಳಕ್ಕೆ ಬೀಳುತ್ತಾರೆ. ಮತ್ತೆ ಆ ಬಾಗಿಲು ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ.
ಈ ವಿಡಿಯೋವನ್ನು ಗೌರವ್ ಕೆ.ಆರ್ ಮಿಶ್ರಾ ಎಂಬುವವರು ಟ್ವೀಟ್ ಮಾಡಿ, ‘ದಕ್ಷಿಣ ಕೊರಿಯಾ ಅಧ್ಯಕ್ಷ ಕಿಮ್ ಭ್ರಷ್ಟಅಧಿಕಾರಿಯೊಬ್ಬರಿಗೆ ಮಾಧ್ಯಮದವರ ಉಪಸ್ಥಿತಿಯಲ್ಲೇ ಮರಣ ದಂಡನೆ ವಿಧಿಸಿದರು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಈ ರೀತಿ ಕಿಮ್ ಭ್ರಷ್ಟಅಧಿಕಾರಿಗಳಿಗೆ ಮರಣ ದಂಡನೆ ವಿಧಿಸುತ್ತಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ. ಆಲ್ಟ್ ನ್ಯೂಸ್ ಸುದ್ದಿಸಂಸ್ಥೆಯು ಈ ಬಗ್ಗೆ ತನಿಖೆಗೆ ಮುಂದಾದಾಗ ವೈರಲ್ ಆಗಿರುವ ವಿಡಿಯೋವು ಎಡಿಟ್ ಮಾಡಿದ ವಿಡಿಯೋ ಎಂದು ತಿಳಿದುಬಂದಿದೆ.
ಮೂಲ ವಿಡಿಯೋ ಐತಿಹಾಸಿಕ ಘಟನೆಯೊಂದನ್ನು ಪ್ರಸ್ತುತ ಪಡಿಸುತ್ತದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಮೋನ್-ಜಾಯ್-ಇನ್ ಮತ್ತು ಉತ್ತರ ಕೊರಿಯಾ ಅಧ್ಯಕ ಕಿಮ್ ಭೇಟಿಯಾದ ಐತಿಹಾಸಿಕ ಕ್ಷಣದ ಸಂದರ್ಭವದು. ಆ ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.