ನಾವಿಬ್ರೂ ನಮ್ಮನ್ನು ಚೆನ್ನಾಗಿ ಬಲ್ಲೆವು: ಭೂತಾನ್ ಗೆಳೆತನ ಗಟ್ಟಿ ಮಾಡಿದ ಮೋದಿ!

By Web DeskFirst Published Aug 18, 2019, 6:51 PM IST
Highlights

ಪ್ರಧಾನಿ ಮೋದಿ ಎರಡು ದಿನಗಳ ಭೂತಾನ್ ಪ್ರವಾಸ ಅಂತ್ಯ| ಥಿಂಪುವಿನ ರಾಯಲ್ ವಿವಿ ವಿದ್ಯಾರ್ಥಿಗಳನ್ನುದದೇಶಿಸಿ ಮೋದಿ ಭಾಷಣ|  ಭಾರತ ಮತ್ತು ಭೂತಾನ್ ನಡುವಿನ ಐತಿಹಾಸಿಕ ಸಂಬಂಧ ಸ್ಮರಿಸಿದ ಪ್ರಧಾನಿ ಮೋದಿ| ಭೂತಾನ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳಿದ  ಪ್ರಧಾನಿ ಮೋದಿ| 

ಥಿಂಪು(ಆ.18): ಭಾರತ ಮತ್ತು ಭೂತಾನ್ ರಾಷ್ಟ್ರಗಳು ಶತಶತಮಾನದಿಂದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧವನ್ನು ವಿನಿಮಯ ಮಾಡುತ್ತಿದ್ದು, ಇದು ಈಗಲೂ ಮುಂದುವರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Addressing students at the Royal University of Bhutan. Watch. https://t.co/eGoTRXS1bI

— Narendra Modi (@narendramodi)

ಎರಡು ದಿನಗಳ ಭೂತಾನ್‌ ಪ್ರವಾಸದಲ್ಲಿದ್ದ ಪ್ರಧಾನಿ, ರಾಜಧಾನಿ ಥಿಂಪುವಿನಲ್ಲಿರುವ ರಾಯಲ್ ವಿವಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಭಾರತ ಮತ್ತು ಭೂತಾನ್ ನಡುವಿನ ಶೈಕ್ಷಣಿಕ ಸಂಬಂಧಕ್ಕೆ ತನ್ನದೇ ಆದ ಇತಿಹಾಸವಿದ್ದು, ಎರಡೂ ದೇಶಗಳ ಪ್ರಧಾನ ಶಿಕ್ಷಣ ಸಂಸ್ಥೆಗಳ ನಡುವೆ ಆಳವಾದ ಸಹಯೋಗ ಬೆಳೆಸುವ ಮೂಲಕ ಇದನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮೋದಿ ನುಡಿದರು.

Prime Minister Narendra Modi attends a cultural program at Tashichhoedzong Palace in Thimphu, . pic.twitter.com/jm48goaLYc

— ANI (@ANI)

ಭೂತಾನ್ ಯುವಕರು ತಮ್ಮ ಕನಸನ್ನು ಸಾಕಾರಗೊಳಿಸುವ ಕ್ಷಮತೆ ಹೊಂದಿದ್ದು, ಭಾರತದೊಂದಿಗಿನ ಶೈಕ್ಷಣಿಕ ಸಹಯೋಗ ಈ ಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

Delhi: Prime Minister Narendra Modi returns from his two-day state visit to Bhutan. External Affairs Minister, Subrahmanyam Jaishankar receives him at the airport. pic.twitter.com/1NOdIJjyGR

— ANI (@ANI)

ಇನ್ನು ತಮ್ಮ ಎರಡು ದಿನಗಳ ಭೂತಾನ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಸ್ವದೇಶಕ್ಕೆ ಮರಳಿದ್ದಾರೆ. 

click me!