
ಅಸ್ತಾನಾ (ಕಜಕಸ್ತಾನ): ಇಲ್ಲಿ ಗುರುವಾರ ಆರಂಭವಾದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗ ಸಭೆಯಲ್ಲಿ ಮಧ್ಯ ಏಷ್ಯಾದ ಪ್ರಮುಖ ನಾಯಕರೆಲ್ಲ ಒಟ್ಟು ಗೂಡಿದ್ದು, ಈ ಭಾಗದಲ್ಲಿ ವ್ಯಾಪಿಸುತ್ತಿರುವ ಭಯೋತ್ಪಾದನೆಯ ಬಗ್ಗೆ ಪ್ರಮುಖವಾಗಿ ಶುಕ್ರವಾರ ಮಾತುಕತೆ ನಡೆಯಲಿದೆ.
ಈ ನಿಮಿತ್ತ ಮೊದಲ ದಿನ ಕಜಕಸ್ತಾನ ಅಧ್ಯಕ್ಷ ನೂರ್‌ಸುಲ್ತಾನ್ ನಜರ್‌ಬಯೇವ್ ಹಮ್ಮಿ ಕೊಂಡಿದ್ದ ಔತಣಕೂಟದಲ್ಲಿ ಮತ್ತು ನಂತರ ನಡೆದ ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪಾಲ್ಗೊಂಡಿದ್ದರು.
ಈ ವೇಳೆ ಉಭಯ ನಾಯಕರು ಶುಭಾಷಯ ವಿನಿಮಯ ಮಾಡಿಕೊಂಡರು. ಇದೇ ವೇಳೆ ನಿಮ್ಮ ಆರೋಗ್ಯ ಹೇಗಿದೆ? ತಾಯಿಯವರ ಆರೋಗ್ಯ ಹೇಗಿದೆ? ಎಂದು ಷರೀಫ್‌ರನ್ನು ಮೋದಿ ವಿಚಾರಿಸಿದರು.
(ಫೈ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.