
ನವದೆಹಲಿ (ಫೆ.26): ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೈಸೂರಿನ ಸಂತೋಷ್ ಎಂಬುವವರಿಗೆ ಅಭಿನಂದನೆ ಸಲ್ಲಿಸಿಸಿದ್ದಾರೆ.
ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 29ನೇ ಸರಣಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಸಂತೋಷ್ ಅವರ ಸಾಧನೆಯನ್ನು ಪ್ರಸ್ತಾಪಿಸಿ, ದೇಶದ ಯುವಜರಿಗೆ ನಿಮ್ಮ ಕೆಲಸ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಡಿಜಿಟಲ್ ವ್ಯವಹಾರದಲ್ಲಿ ಬಹುಮಾನ ಗೆದ್ದಿದ್ದ ಸಂತೋಷ್ ತಮ್ಮ ಬಹುಮಾನವನ್ನು ಬೆಂಕಿ ಅವಘಡದದಲ್ಲಿ ಗಾಯಗೊಂಡಿದ್ದ ವೃದ್ಧೆಗೆ ನೆರವಾಗಲು ಮುಂದಾಗಿದ್ದರು. ಸಂತೋಷ್ ಅವರಿಗೆ ಡಿಜಿಟಲ್ ವ್ಯವಹಾರದಲ್ಲಿ ಲಕ್ಕಿಡಿಪ್’ನಲ್ಲಿ ಬಹುಮಾನ ಬಂದಿದ್ದು, ಈ ಬಹುಮಾನವನ್ನು ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡು ಗಾಯಗೊಂಡಿದ್ದ ವೃದ್ದೆಯ ಸಹಾಯಕ್ಕೆ ನೆರವು ನೀಡಿದ್ದರು.
ಈ ಬಗ್ಗೆ ಸಂತೋಷ್ ಮೋದಿ ಆಪ್ ನಲ್ಲಿ ಬರೆದುಕೊಂಡಿದ್ದರು. ಇದನ್ನು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಸಂತೋಷ್ ಜೀ ನೀವು ಯುವಕರಿಗೆ ಮಾದರಿಯಾಗಿದ್ದೀರಿ. ಇದಕ್ಕಾಗಿ ನಮ್ಮ ಅಭಿನಂದನೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.