ಜಿಟಿ ದೇವೇಗೌಡರಿಗೆ ಜೆಡಿಎಸ್‌ನಿಂದಲೇ ಇದೆಂಥಾ ಶಾಕ್..!

By Web Desk  |  First Published Sep 25, 2019, 9:53 PM IST

ಜಿಟಿ ದೇವೇಗೌಡರಿಗೆ ಶಾಕ್ ಕೊಟ್ಟ ಜೆಡಿಎಸ್/  ಜೆಡಿಎಸ್ ಸಂಸದೀಯ ಮಂಡಳಿ ಸಭೆಗೆ ಆಹ್ವಾನ ಇಲ್ಲ/ ನಾಯಕರ ಲಿಸ್ಟ್ ನಲ್ಲಿ ಜಿಟಿಡಿ ಹೆಸರು ಮಾಯ/ ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದೆ ಮುಳುವಾಯ್ತಾ?


ಬೆಂಗಳೂರು[ಸೆ. 25] ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಆಗಾಗ ಅಮಾಧಾನ ಹೊರ ಹಾಕುತ್ತಿದ್ದ ಜಿಟಿ ದೇವೇಗೌಡ ಅವರನ್ನು ಇದೀಗ ಜೆಡಿಎಸ್ ಹೊರಗಿಟ್ಟಿದೆ.  ಜೆಡಿಎಸ್ ರಾಜ್ಯ ಸಂಸದೀಯ ಮಂಡಳಿ ಸಭೆ ಗುರುವಾರ ನಡೆಯಲಿದ್ದು ಪಟ್ಟಿಯಲ್ಲಿ ಜಿಟಿ ದೇವೇಗೌಡರ ಹೆಸರಿಲ್ಲ.

ನನ್ನನ್ನು ದಸರಾ ಮಾಡಲು ಬಿಜೆಪಿಯವರೆ ಕಳುಹಿಸಿದ್ದು... ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಹೋಗಿ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದರು ಎಂದು  ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಜಿಟಿ ದೇವೇಗೌಡರಿಗೆ ಇದೀಗ ಜೆಡಿಎಸ್ ಒಂದು ಶಾಕ್ ನೀಡಿದೆ.

Tap to resize

Latest Videos

undefined

ಸಂಸದೀಯ ಮಂಡಳಿ ಸಭೆಯಿಂದ ಗೌಡರನ್ನು ಹೊರಗಿಟ್ಟಿದೆ. ಜಿಟಿ ದೇವೇಗೌಡರು ಆಗಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡುತ್ತಾ ಬಂದಿದ್ದರು. ದೋಸ್ತಿ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದ ಜಿಟಿಡಿ ದೋಸ್ತಿ ಪತನದ ನಂತರ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇತ್ತೀಚೆಗೆ ತಮ್ಮ ನಾಯಕರ ವಿರುದ್ಧವೇ ಮಾತನಾಡಿದ್ದರು.

ವಿಶ್ವನಾಥ್‌ಗೆ ಶಾಸ್ತಿ ; ಹುಣಸೂರಿನಲ್ಲಿ ಜೆಡಿಎಸ್‌ನಿಂದ ಅಚ್ಚರಿಯ ಅಭ್ಯರ್ಥಿ!

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜಿಟಿಡಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನೇ ಮಣಿಸಿದ್ದರು. ಆಗಾಗ ಭಾಷಣದ ವೇಳೆ ನಿಮ್ಮನ್ನು ಸಿಎಂ ಗಿಂತಳು ಹೆಚ್ಚಿನ ಅಧಿಕಾರದಲ್ಲಿ ಇಟ್ಟು ನೋಡಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ ಉದಾಹರಣೆಗಳು ಸಾಕಷ್ಟಿದೆ. ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಿಟಿಡಿ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು.  ತಿಂಗಳು ಕಾಲ ದೂರವೇ ಇದ್ದ ಜಿಟಿಡಿ ನಂತರ ಒಲ್ಲದ ಮನಸ್ಸಿನಿಂದ ಖಾತೆ ಒಪ್ಪಿಕೊಂಡಿದ್ದರು.

ಜಿಟಿಡಿ ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎಂಬ ಮಾತುಗಳು ತಿಂಗಳುಗಳ ಹಿಂದೆಯೇ ರಾಜಕಾರಣದ ವಲಯದಲ್ಲಿ ಕೇಳಿಬಂದಿತ್ತು. ಈಗನ ಬದಲಾವಣೆಗಳನ್ನು ಗಮನಿಸಿದರೆ ಕಾಲ ಹತ್ತಿರ ಆಗುತ್ತಿದೆ ಎಂದೇ ಹೇಳಬಹುದಾಗಿದೆ.

 

click me!