ಕೊನೆಕ್ಷಣದಲ್ಲಿ ದೀಪಾವಳಿ ರಜಾ ಪ್ರವಾಸ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ಹಣ ಉಳಿಸುವ ಉಪಾಯ ಇಲ್ಲಿದೆ

By Suvarna Web DeskFirst Published Oct 14, 2017, 8:23 PM IST
Highlights

ರಜಾ ಪ್ರವಾಸಗಳನ್ನು  ಹಮ್ಮಿಕೊಂಡಿರುವ ಹೆಚ್ಚು ಅನುಭವ ಇಲ್ಲದಿದ್ದಲ್ಲಿ, ಕೊನೆ ಗಳಿಗೆಯಲ್ಲಿ ದೀಪಾವಳಿ ರಜಾಪ್ರವಾಸಕ್ಕೆ ಹೊರಡುವ ಯೋಚನೆ ನಿಮಗೆ ಬಹಳ ದುಬಾರಿಯಾಗಿ ಪರಿಣಮಿಸುವುದು. ಹಬ್ಬದ ಸೀಸನ್’ನಲ್ಲಿ ಹೋಟೆಲ್  ಹಾಗೂ ಟಿಕೆಟ್ ದರಗಳು ಏರಿಕೆಯಾಗುವುದು ಸಾಮಾನ್ಯ.  ಆದರೆ, ಇದರರ್ಥ ನೀವು ನಿರಾಶರಾಗಬೇಕೆಂದಿಲ್ಲ; ಅದಾಗ್ಯೂ, ಹಣವನ್ನು ಉಳಿಸುವ ಹಾಗೂ ನಿಮ್ಮ ಬಜೆಟ್’ಗೆ ಹೊಂದುವಂತಹ ಕೆಲವು ಉಪಾಯಗಳಿವೆ. ದೀಪಾವಳಿ ರಜೆ ಪ್ರವಾಸವನ್ನು ಕಡಿಮೆ ಬಜೆಟ್’ನಲ್ಲಿ ಹೇಗೆ ಎಂಜಾಯ್ ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಟಿಪ್ಸ್

ರಜಾ ಪ್ರವಾಸಗಳನ್ನು  ಹಮ್ಮಿಕೊಂಡಿರುವ ಹೆಚ್ಚು ಅನುಭವ ಇಲ್ಲದಿದ್ದಲ್ಲಿ, ಕೊನೆ ಗಳಿಗೆಯಲ್ಲಿ ದೀಪಾವಳಿ ರಜಾಪ್ರವಾಸಕ್ಕೆ ಹೊರಡುವ ಯೋಚನೆ ನಿಮಗೆ ಬಹಳ ದುಬಾರಿಯಾಗಿ ಪರಿಣಮಿಸುವುದು.

ಹಬ್ಬದ ಸೀಸನ್’ನಲ್ಲಿ ಹೋಟೆಲ್  ಹಾಗೂ ಟಿಕೆಟ್ ದರಗಳು ಏರಿಕೆಯಾಗುವುದು ಸಾಮಾನ್ಯ.  ಆದರೆ, ಇದರರ್ಥ ನೀವು ನಿರಾಶರಾಗಬೇಕೆಂದಿಲ್ಲ; ಅದಾಗ್ಯೂ, ಹಣವನ್ನು ಉಳಿಸುವ ಹಾಗೂ ನಿಮ್ಮ ಬಜೆಟ್’ಗೆ ಹೊಂದುವಂತಹ ಕೆಲವು ಉಪಾಯಗಳಿವೆ. ದೀಪಾವಳಿ ರಜೆ ಪ್ರವಾಸವನ್ನು ಕಡಿಮೆ ಬಜೆಟ್’ನಲ್ಲಿ ಹೇಗೆ ಎಂಜಾಯ್ ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಟಿಪ್ಸ್

ಸ್ನೇಹಿತರೊಂದಿಗೆ ಸೇರಿ ಪ್ರವಾಸ ಕೈಗೊಳ್ಳಿ:

ಸ್ನೇಹಿತರೊಂದಿಗೆ ಪ್ರವಾಸಗಳನ್ನು ಕೈಗೊಳ್ಳುವುದರಿಂದ ಪ್ರಯಾಣ ಮತ್ತು ಲಾಡ್ಜಿಂಗ್ ಖರ್ಚುಗಳ ಹೊರೆ ಕಡಿಮೆ ಮಾಡಬಹುದು. ಗುಂಪಿನ ಸದಸ್ಯರ ಸಂಖ್ಯೆ 4,8, 12… ಆಗಿದ್ದರೆ ಹಣ ಉಳಿಸುವ ದೃಷ್ಟಿಯಿಂದ ಉತ್ತಮ. ಎಲ್ಲರು  ಸೇರಿ ಬಾಡಿಗೆ ಕಾರಿನಲ್ಲಿ ಪ್ರಯಾಣಕ್ಕೆ ಹೊರಡುವುದಾದರೆ,  ಸಾಮಾನ್ಯವಾಗಿ  ಕಾರುಗಳಲ್ಲಿ ಡ್ರೈವರ್ ಹೊರತು ಪಡಿಸಿ 4 ಅಥವಾ 8 ಮಂದಿ ಪ್ರಯಾಣ ಮಾಡಬಹುದಾಗಿದೆ.  ದಾಹರಣೆಗೆ ಕಾರಿನ ಬಾಡಿಗೆ ₹ 2000 ಆಗಿದೆಯೆಂದು ಭಾವಿಸಿ. 3 ಮಂದಿ ಇದ್ದ ಪಕ್ಷದಲ್ಲಿ ಪ್ರತಿಯೊಬ್ಬರಿಗೆ ₹ 667 ಖರ್ಚು ಬೀಳುತ್ತದೆ. ಅದೇ 4 ಮಂದಿಯಿದ್ದರೆ, ಖರಚು ₹ 500ಕ್ಕೆ ಇಳಿಯುತ್ತದೆ. ಹೀಗೆ ಪ್ರತಿಯೊಬ್ಬರು ಸುಮಾರು ₹200 ವರೆಗೆ ಉಳಿಸಬಹುದಾಗಿದೆ.

ಇದೇ ರೀತಿ ಲಾಡ್ಜಿಂಗ್ ಖರ್ಚು ಕೂಡಾ ಕಡಿಮೆ ಮಾಡಬಹುದು.   

ಪಾಡ್ (Pod) ಹೋಟೆಲ್’ಗಳಲ್ಲಿ ತಂಗಿ:

ಜಪಾನ್, ಅಮೆರಿಕಾ ಮತ್ತು ಯೂರೋಪಿನ ದೇಶಗಳಲ್ಲಿ ಬಹಳ ಜನಪ್ರಿಯತೆ ಗಳಿಸಿದ ಬಳಿಕ ಪಾಡ್  ಮಾದರಿಯ ಹೋಟೆಲ್’ಗಳು ಭಾರತದಲ್ಲೂ ಆರಂಭವಾಗಿದೆ.   ಪಾಡ್ ಹೋಟೆಲ್’ಗಳಲ್ಲಿ  ವ್ಯಕ್ತಿಗೆ ಅಲ್ಪಾವಧಿಗೆ ಸಾಕಾಗುವಷ್ಟು ಚಿಕ್ಕ ಹಾಗೂ ಚೊಕ್ದಾದಾಗಿರುವ  ಸ್ಥಳವಿರುತ್ತದೆ. ಅದರಲ್ಲಿ ಬೆಡ್, ವೈಫೈ, ಟಿವಿ ಹಾಗೂ ಏಸಿ ವ್ಯವಸ್ಥೆಯಿರುತ್ತದೆ. ಮುಂಬೈಯಲ್ಲಿ ಇಂತಹ ಹೋಟೆಲ್ ಗಳು ಈಗಾಗಲೇ ಆರಂಭವಾಗಿವೆ. ದೇಶದ ಇತರ ನಗರಗಳಲ್ಲೂ ಶೀಘ್ರದಲ್ಲೇ ಈ ಪಾಡ್ ಹೋಟೆಲ್’ಗಳು ಆರಂಭಾಗಬಹುದು.  ಸ್ವಲ್ಪ ಸಮಯಕ್ಕಾಗಿ, ಕಡಿಮೆ ಖರ್ಚಿನಲ್ಲಿ ತಂಗಲು ಬಯಸುವವರಿಗೆ ಇದು ಸೂಕ್ತ ಸೌಲಭ್ಯವಾಗಿದೆ.

ರೈಲು ಪ್ರಯಾಣ:

ಹಣ ಉಳಿಸುವ ದೃಷ್ಟಿಯಿಂದ ರೈಲು ಪ್ರಯಾಣ ಹೆಚ್ಚು ಸೂಕ್ತ.  ರೈಲಿನಲ್ಲಿ 3 ತಿಂಗಳು ಮುಂಚಿತವಾಗಿ ಟಿಕೆಟನ್ನು ಕಾಯ್ದಿರಿಸಬಹುದು. ಕೊನೆ ಕ್ಷಣದಲ್ಲಾದರೆ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿಯೂ, ರೈಲಿನ 3-ಟೈರ್ ಎಸಿ ಟಿಕೆಟ್ ವಿಮಾನ ಟಿಕೆಟ್’ಗಿಂತ ಅಗ್ಗವಾಗಿರುತ್ತದೆ.  

ರಿಯಾಯಿತಿ ಆಫರ್’ಗಳು:

ಆನ್’ಲೈನ್ ಪ್ರವಾಸ ಏಜನ್ಸಿಗಳು ಹಾಗೂ ಇನ್ನಿತರ ವ್ಯಾಪಾರಿ ವೆಬ್’ಸೈಟ್’ಗಳು ಆಗಾಗ್ಗೆ  ರಿಯಾಯಿತಿ ದರದಲ್ಲಿ ಆಫರ್’ಗಳನ್ನು ಹೊರಡಿಸುತ್ತವೆ. ಅವುಗಳು ನೀಡಿದ ಕೂಪನ್ ಕೋಡ್’ಗಳನ್ನು ಬಳಸಿ ಟಿಕೆಟ್ ಬುಕಿಂಗ್, ಲಾಡ್ಜ್ ಬುಕಿಂಗ್ ಗಳಲ್ಲಿ ರಿಯಾಯಿತಿ ಪಡೆಯಬಹುದು.

ಈ ರೀತಿ ಕೊನೆ ಕ್ಷಣದಲ್ಲಿ ಪ್ಲಾನ್ ಮಾಡಿರುವ ಪ್ರವಾಸಗಳಲ್ಲೂ ಹಣವನ್ನು ಉಳಿಸುವ ಹಲವು ದಾರಿಗಳಿವೆ.

---

ಟೀಂ ಬ್ಯಾಂಕ್ ಬಝಾರ್

https://www.bankbazaar.com/

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

click me!