ದೇಶದಲ್ಲೀಗ ತುರ್ತು ಪರಿಸ್ಥಿತಿಯ ಛಾಯೆ: ದೇವೇಗೌಡರ ಆತಂಕ

Published : Oct 14, 2017, 06:31 PM ISTUpdated : Apr 11, 2018, 12:44 PM IST
ದೇಶದಲ್ಲೀಗ ತುರ್ತು ಪರಿಸ್ಥಿತಿಯ ಛಾಯೆ: ದೇವೇಗೌಡರ ಆತಂಕ

ಸಾರಾಂಶ

ಪ್ರಾದೇಶಿಕ ಪಕ್ಷಗಳ ದೌರ್ಬಲ್ಯ, ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣವೇ ಇಂದಿನ ಪರಿಸ್ಥಿತಿಗೆ ಕಾರಣ

ಹಾಸನ: ಇಂದು ಭಾರತದಲ್ಲಿ ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿ ಛಾಯೆ ಕಾಣಿಸಿಕೊಳ್ಳಲಾರಂಭಿಸಿದೆ. ಇದಕ್ಕೆ ಕಾರಣ ಪ್ರಾದೇಶಿಕ ಪಕ್ಷಗಳ ದೌರ್ಬಲ್ಯ ಮತ್ತು ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಹಳ ದಿನಗಳಿಂದಲೂ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಬಗ್ಗೆ ಚರ್ಚಿಸಲಾಗುತ್ತಿತ್ತು. ಈಗ ಏಕಾಏಕಿ ಒಂದು ರಾಜ್ಯದ ಚುನಾವಣೆ ದಿನಾಂಕ ಘೋಷಣೆ ಮಾಡಿ, ಪ್ರಧಾನಿ ಸ್ವ ರಾಜ್ಯದ ಚುನಾವಣೆ ದಿನಾಂಕವನ್ನು ಪ್ರಕಟಿಸಿಲ್ಲ. ಇದರ ಹಿನ್ನೆಲೆ, ಉದ್ದೇಶ ಏನು ಎಂಬುದನ್ನು ಬಹಿರಂಗಪಡಿಸಬೇಕಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

 ಸಂವಿಧಾನ ದತ್ತವಾದ ಚುನಾವಣಾ ಆಯೋಗವನ್ನು ದೂಷಣೆ ಮಾಡಿ ಪ್ರಯೋಜನವಿಲ್ಲ ಎಂಬ ಸ್ಥಿತಿ ದೇಶದಲ್ಲಿ ಇದೆ. ಹಿಮಾಚಲ ಪ್ರದೇಶದ ಚುನಾವಣೆ ನಾಮಪತ್ರ ಸಲ್ಲಿಕೆಯ ದಿನಾಂಕ ಮತದಾನ ದಿನಾಂಕದ ನಡುವೆ ಕೇವಲ 9 ದಿನಗಳಿವೆ. ಈ ಅಲ್ಪ ಪ್ರಮಾಣದ ಅವಧಿಯಲ್ಲಿ ಆರ್ಥಿಕವಾಗಿ ದುಸ್ಥಿತಿಯಲ್ಲಿ ಇರುವ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಅವಕಾಶವಾದಿ ಕಾಂಗ್ರೆಸ್: ಪ್ರಾದೇಶಿಕ ಪಕ್ಷಗಳ ಈ ದೌರ್ಬಲ್ಯ ಮತ್ತು ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣದಿಂದ ಈ ರೀತಿಯ ಚುನಾವಣೆ ನಡೆಸಲಾಗುತ್ತಿದೆ. ವಿಶೇಷವಾಗಿ ಪ್ರಾದೇಶಿಕ ಪಕ್ಷಗಳು ಎಚ್ಚರವಹಿಸಲು ಸೂಕ್ತ ಕಾಲವಿದು. ಕಾಂಗ್ರೆಸ್ ತನಗೆ ದರ್ದ್ ಇದ್ದಾಗ ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಂಡು ಬೇಡವಾದಾಗ ಬೀಸಾಡುತ್ತಿದೆ.

ದೇಶದ ಶಾಸಕಾಂಗ, ಕಾರ್ಯಾಂಗ, ಸಿಬಿಐ, ಕೇಂದ್ರ ಆದಾಯ ತೆರಿಗೆ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯ (ಇಡಿ) ಪ್ರಧಾನಿಯವರ ನಿಯಂತ್ರಣದಲ್ಲಿ ಇವೆ. ಈ ನಡುವೆ ನ್ಯಾಯಾಂಗ ವ್ಯವಸ್ಥೆ ಸರ್ವ ಸ್ವತಂತ್ರವಾಗಿ ನಡೆದುಕೊಂಡು ತನ್ನ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವುದು ಹಿಂದಿಗಿಂತ ಇಂದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ದಿನಗಳಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯವರು ಯಾವಾಗ ಬೇಕಾದರೂ, ಯಾರ ಮನೆಯ ಮೇಲಾದರೂ ದಾಳಿ ನಡೆಸುತ್ತಿದ್ದಾರೆ. ಬೇಕೆಂದಾಗ ಇಡಿ ಬಳಸಿಕೊಂಡು ತನಿಖೆ ನಡೆಸಲಾಗುತ್ತಿದೆ. ದೇಶದಲ್ಲಿ ಸಮಾಜವಾದಿ ಪಕ್ಷ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತಿಲ್ಲ. ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಾ ದೇಶದಲ್ಲಿ ಗೌಣವಾಗುತ್ತಿದೆ. ಈ ಕಾರಣಗಳಿಂದಲೇ ಇಂದು ದೇಶದಲ್ಲಿ ಇಂದಿರಾ ಕಾಲದ ತುರ್ತು ಪರಿಸ್ಥಿತಿ ನೆರಳು ಕಾಣಿಸಲಾರಂಭಿಸಿದೆ ಎಂದು ಹೇಳಬೇಕಾಗುತ್ತದೆ ಎಂದರು.

ಇಂದಿರಾ ತುರ್ತು ಪರಿಸ್ಥಿತಿ ಹೇರಿದ್ದ ಕಾಲದಲ್ಲಿ ಬಿಜೆಪಿಯ ವಾಜಪೇಯಿ, ಅಡ್ವಾಣಿ , ಜಯಪ್ರಕಾಶ್ ನಾರಾಯಣ ಮತ್ತಿತರ ನಾಯಕತ್ವದಲ್ಲಿ ದೇಶಾದ್ಯಂತ ಪ್ರಬಲ ಹೋರಾಟ ನಡೆದು, ಸರ್ವಾಧಿಕಾರಿ ವ್ಯವಸ್ಥೆಗೆ ಕಡಿವಾಣ ಹಾಕಲಾಯಿತು. ಈಗ ಎದುರಾಗುತ್ತಿರುವ ತುರ್ತು ಪರಿಸ್ಥಿತಿಯ ನೆರಳನ್ನು ಓಡಿಸಲು ಹೇಗೆ ? ಯಾರ ನೇತತ್ವದಲ್ಲಿ ಹೋರಾಟ ಮಾಡಬೇಕು ?ಎಂಬ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ರಾಜ್ಯ ಸರ್ಕಾರದ ವಿಫಲತೆ ಕಾರಣ: ಬೆಂಗಳೂರು- ಮೈಸೂರು ನಂದಿ ಇನ್ ಸ್ಪ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ನಡೆಸಿದ ಬಗ್ಗೆ ಸದನ ಸಮಿತಿ ನೀಡಿದ ವರದಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಲು ಕಾರಣ ರಾಜ್ಯ ಸರ್ಕಾರ ಮತ್ತು ಅಡ್ವೋಕೇಟ್ ಜನರಲ್ ಎಂದು ನೇರವಾಗಿ ಅಪಾದಿಸಿದ ಗೌಡರು, ವಿಶೇಷ ತನಿಖಾ ದಳ (ಎಸ್’ಐಟಿ) ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನಡೆಸುತ್ತಿರುವ ತನಿಖೆಗೆ ಹೈಕೋರ್ಟ್ ನೀಡಿದ ತಡೆಯಾಜ್ಞೆಗೆ ವಿಶೇಷ ಹಿರಿಯ ವಕೀಲರನ್ನು ನೇಮಕವಾಗಿ ಸುಪ್ರಿಂನಲ್ಲಿ ಅರ್ಜಿ ಸಲ್ಲಿಸುತ್ತದೆ. ನೈಸ್ ತಡೆಗೆ ಏಕೆ ಸುಪ್ರಿಂನಲ್ಲಿ ಅರ್ಜಿ ಸಲ್ಲಿಸಿಲ್ಲ ? ಎಂದು ಪ್ರಶ್ನಿಸಿದರು. ಸದನ ಸಮಿತಿ ವರದಿಯಂತೆ ಕ್ರಮ ತೆಗೆದುಕೊಂಡು

ಅನೇಕ ರಾಜ ಕಾರಣಿಗಳು, ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ. ಈ ಕಾರಣದಿಂದಲೂ ಸದನ ಸಮಿತಿ ವರದಿ ಜಾರಿಗೆ ಹಿನ್ನೆಡೆಯಾಗುತ್ತಿರಬಹುದು. ರಾಜ್ಯ ದಲ್ಲಿ ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ಈ ವಿಚಾರದ ಬಗ್ಗೆ ಜಾಣ ಮರೆವು ನೀತಿ ಅನುಸರಿಯುತ್ತಿದೆ. ನೈಸ್ ಹಗರಣವಾಗಿ 23 ವರ್ಷಗಳಾಗವೆ.ಇನ್ನೂ ಕ್ರಮ ಆಗಿಲ್ಲ ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ
Hate Speech Bill: ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ