9.7 ಕೋಟಿಗೆ ಸೇಲಾಯ್ತು ಈ ಪಾರಿವಾಳ!: ಖರೀದಿಗಾಗಿ ನಿಂತಿದ್ರು ಕ್ಯೂ!

By Web DeskFirst Published Mar 23, 2019, 3:28 PM IST
Highlights

ಪಾರಿವಾಳವೊಂದಕ್ಕೆ 9.7ಕೋಟಿ ನೀಡಿ ಖರೀದಿಸಿದನೀತ| ಅಷ್ಟಕ್ಕೂ ಆ ಪರಿವಾಳದ ವಿಶೇಷವೇನು?

ಬೀಜಿಂಗ್[ಮಾ.23]: ಪಾರಿವಾಳ ಅತ್ಯಂತ ಸಾಮಾನ್ಯ ಹಕ್ಕಿ. ರಸ್ತೆಗಳಲ್ಲಿ, ಮರ ಹಾಗೂ ಪಾರ್ಕ್ ಗಳಲ್ಲಿ ದಿನನಿತ್ಯ ಪರಿವಾಳಗಳು ನೋಡಲು ಸಿಗುತ್ತವೆ. ಆದರೆ ನಿಮಗೆ ಗೊತ್ತಾ ಇಲ್ಲೊಂದು ಬಹಳ ವಿಶೇಷ ಪಾರಿವಾಳವಿದೆ. ಇದು ಬರೋಬ್ಬರಿ 9.7ಕೋಟಿ ಬೆಲೆ ಬಾಳುತ್ತದೆ. ಹೌದು ಈ ವಿಶೇಷ ಪಾರಿವಾಳವನ್ನು ಚೀನಾದ ಓರ್ವ ವ್ಯಕ್ತಿ 1.4ಮಿಲಿಯನ್ ಡಾಲರ್ ಅಂದರೆ 9.7ಕೋಟಿ ನೀಡಿ ಖರೀದಿಸಿದ್ದಾರೆ.

ಅರ್ಮಾಂಡೋ ಹೆಸರಿನ ಈ ಪರಿವಾಳ ಬೆಲ್ಜಿಯಂನದ್ದು. 'ಲೂವಿಸ್ ಹೆಮಿಲ್ಟನ್ ಆಫ್ ಪಿಜನ್ಸ್' (Lewis Hamilton of pigeons) ಎಂದೇ ಕರೆಸಿಕೊಳ್ಳುವ ಅರ್ಮಾಂಡೋ ಜಗತ್ತಿನ ಏಕೈಕ ಲಾಂಗ್ ಡಿಸ್ಟೆನ್ಸ್ ರೇಸಿಂಗ್ ಪಿಜನ್ ಆಗಿದೆ. 

ಇದೇ ಕಾರಣದಿಂದ ರ್ಮಾಂಡೋ ಅತಿ ಹೆಚ್ಚು ಬೆಲೆಗೆ ಸೇಲ್ ಆಗಿ ಜಗತ್ತಿನ ಅತ್ಯಂತ ದುಬಾರಿ ಪಾರಿವಾಳ ಎಂಬ ಖ್ಯಾತಿಗೆ ಪಾತ್ರವಾಗಿದೆ. 5 ವರ್ಷದ ಈ ಪಾರಿವಾಳ ನಿವೃತ್ತಿ ಪಡೆಯುವ ಹಂತದಲ್ಲಿದೆ. ಹೀಗಿದ್ದರೂ ಇದನ್ನು ಚೀನಾದ ವ್ಯಕ್ತಿಯೊಬ್ಬ ಬೃಒಬ್ಬರಿ 1.4ಕೋಟಿಗೆ ಖರೀದಿಸಿದ್ದಾನೆ.

Meet a prized racing pigeon named Armando, that just became the most expensive bird to ever be sold at auction. IN-09TU pic.twitter.com/mjgWSw2XwZ

— CNN Newsource (@CNNNewsource)

ಪಾರಿವಾಳಗಳ ಈ ಹರಾಜು ಪ್ರಕ್ರಿಯೆಯಲ್ಲಿ ಅರ್ಮಾಂಡೋವನ್ನು ಹೊರತುಪಡಿಸಿ 177 ಪಾರಿವಾಳಗಳು ಇದ್ದವು. ಇವುಗಳಲ್ಲಿ ಅರ್ಮಾಂಡೋವಿನ 7 ಮರಿಗಳು ಕೂಡಾ ಸೇರಿವೆ.

click me!