ಹರಿದ್ವಾರದಲ್ಲಿದೆ ಲಾಹೋರ್ ಕೋರ್ಟ್ ಹಸ್ತಾಂತರಿಸಿದ್ದ ಭಗತ್ ಸಿಂಗ್ ಗಲ್ಲುಶಿಕ್ಷೆಯ ಆ ಸತ್ಯ!

Published : Mar 23, 2019, 01:14 PM IST
ಹರಿದ್ವಾರದಲ್ಲಿದೆ ಲಾಹೋರ್ ಕೋರ್ಟ್ ಹಸ್ತಾಂತರಿಸಿದ್ದ ಭಗತ್ ಸಿಂಗ್ ಗಲ್ಲುಶಿಕ್ಷೆಯ ಆ ಸತ್ಯ!

ಸಾರಾಂಶ

ಹರಿದ್ವಾರದಲ್ಲಿದೆ ಲಾಹೋರ್ ಕೋರ್ಟ್ ಹಸ್ತಾಂತರಿಸಿದ್ದ ಭಗತ್ ಸಿಂಗ್ ಗಲ್ಲುಶಿಕ್ಷೆಯ ಆ ಸತ್ಯ!| ಡಿಜಿಟಲೀಕರಣಗೊಳಿಸಲು ಹೈಕೋರ್ಟ್ ನಕಾರ

ನವದೆಹಲಿ[ಮಾ.23]: ಕ್ರಾಂತಿಕಾರಿ ಭಗತ್ ಸಿಂಗ್ ಗಲ್ಲಿಗೆ ಸಂಬಂಧಿಸಿದ ಸತ್ಯವೊಂದು ಉತ್ತರಾಖಂಡ್ ನ ಜಿಲ್ಲೆಯಲ್ಲಿ ಅಡಗಿದೆ. ಹೌದು ಪಾಕಿಸ್ತಾನದ ಲಾಹೋರ್ ನ್ಯಾಯಾಲಯದಿಂದ ಹರಿದ್ವಾರಕ್ಕೆ ಹಸ್ತಾಂತರಿಸಲಾದ ಆದ ಈ ಪ್ರಕರಣದ ಪ್ರತಿ ಉರ್ದು ಭಾಷೆಯಿಂದ ಹಿಂದಿಗೆ ಅನುಬವಾದಗೊಂಡ ಬಳಿಕ ಹರಿದ್ವಾರದ ಗುರುಕುಲ ಕಾಂಗಡಿ ವಿಶ್ವವಿದ್ಯಾನಿಲಯದಲ್ಲಿ ಡಿಜಿಟಲೀಕರಣಗೊಳ್ಳಬೇಕಿತ್ತು. ಆದರೆ ಈ ದಾಖಲೆಗಳನ್ನು ಸಾರ್ವಜನಿಕಗೊಳಿಸಬಾರದೆಂದು ಹೈಕೋರ್ಟ್ ಆದೇಶಿಸಿದ ಬಳಿಕ ಡಿಜಿಟಲೀಕರಣಗೊಳಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು.

ವಿಶ್ವವಿದ್ಯಾನಿಲಯದ ಸಂಗ್ರಹಾಲಯದಲ್ಲಿರು ವಿಚಾರಣೆಯ ಈ 1667 ಪ್ರತಿಯ ಈ ದಾಖಲೆಯನ್ನು ದೂರದಿಂದ ನೋಡಲಷ್ಟೇ ಅನುಮತಿ ನೀಡಲಾಗಿದೆ. ಡಿಜಿಟಲೀಕರಣಗೊಂಡಿದ್ದರೆ ಈ ವಿಚಾರಣೆಯ ಪ್ರತಿಯೊಂದು ಪುಟವನ್ನೂ ನೋಡಬಹುದಾಗಿತ್ತು. ಆದರೀಗ ಹೈಕೋರ್ಟ್ ಆದೇಶದಿಂದ ಇದು ಅಸಾಧ್ಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಕ್ರಾಂತಿ ವೀರ ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜ್ಗುರು ಮೂವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಿವರ ಸಾವಿನ ಆಕ್ರೋಶದ ಕಿಡಿ ಇಂದಿಗೂ ಭಾರತೀಯರಲ್ಲಿ ಕಾಣಬಹುದು.

1930ರ ಮೇ 5 ರಂದು ಲಾಹೋರ್ ನ್ಯಾಯಾಲಯ ಭಗತ್ ಸಿಂಗ್, ಸುಖ್ ದೇವ್ ಸೇರಿದಂತೆ ಒಟ್ಟು 18 ಜನರ ವಿಚಾರಣೆ ಆರಂಭಿಸಿತ್ತು. 1930 ಸಪ್ಟೆಂಬರ್ 11 ರಂದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾರ್ಚ್ 23 1931 ರಂದು ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜ್ ಗುರು ಈ ಮೂವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. 

ಲಾಹೋರ್ ನ್ಯಾಯಾಲಯದಲ್ಲಿ ನಡೆದಿದ್ದ ಈ ಐತಿಹಾಸಿಕ ವಿಚಾರಣೆಯ ಪ್ರತಿಲಿಪಿಯನ್ನು 2009ರಲ್ಲಿ ಗುರುಕುಲ ಕಾಂಗಡಿ ವಿಶ್ವವಿದ್ಯಾನಿಲಯದ ಅಂದಿನ ಕುಲಪತಿ ಪ್ರೊ. ಸ್ವತಂತ್ರ ಕುಮಾರ್ ಶ್ರಮವಹಿಸಿ ಹರಿಸ್ವಾರ ಸೇರುವಂತೆ ಮಾಡಿದ್ದರು. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿ ಲಕ್ಷ್ಮಣ್ ಶರ್ಮಾ ಈ ವಿಚಾರಣೆಯ ದಾಖಲೆಗಳನ್ನು ಉರ್ದು ಭಾಷೆಯಿಂದ ಹಿಂದಿಗೆ ಅನುವಾದಿಸಿದ್ದರು.

ಅಂದಿನಿಂದ ಈ ದಾಖಲೆಗಳು ಸಾಕ್ಷಿ ಎಂಬಂತೆ ಸಂಗ್ರಹಾಲಯದಲ್ಲಿ ಇವೆ. ಇವುಗಳು ಹಾಳಾಗುತ್ತವೆ ಎಂಬ ನಿಟ್ಟಿನಲ್ಲಿ ಯಾರಿಗೂ ಇವುಗಳನ್ನು ಹತ್ತಿರದಿಂದ ನೋಡುವ ಅವಕಾಶ ನೀಡಿಲ್ಲ. ಭಾರತೀಯ ಯುವಜನರಿಗೆ ಈ ವಿಚಾರಣೆಯ ಇಂಚಿಂಚೂ ಮಾಹಿತಿ ನಿಡುವ ಸಲುವಾಗಿ ಡಿಜಿಟಲೀಕರಣ ಆರಂಭಿಸಿತ್ತು ಆದರೆ ನ್ಯಾಯಾಲಯದ ಆದೇಶದಿಂದ ಇದಕ್ಕೆ ಕಡಿವಾಣ ಹಾಕಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!