
ನವದೆಹಲಿ: ನೌಕರರ ಭವಿಷ್ಯನಿಧಿಯ ಮೇಲಿನ ಬಡ್ಡಿ ದರವನ್ನು ಸರ್ಕಾರ 2017-18ನೇ ಸಾಲಿನಲ್ಲಿ ಶೇ. 8.55ಕ್ಕೆ ಇಳಿಕೆ ಮಾಡಿದೆ. ಇದು ಕಳೆದ 5 ವರ್ಷದಲ್ಲೇ ಕನಿಷ್ಠ ಬಡ್ಡಿದರ ಎನಿಸಿಕೊಂಡಿದೆ.
2016-17ನೇ ಸಾಲಿನಲ್ಲಿ 8.65ರ ಬಡ್ಡಿದರವನ್ನು ನಿಗದಿ ಮಾಡಲಾಗಿತ್ತು. 2018ರ ಫೆಬ್ರವರಿಯಲ್ಲಿ ನಡೆದ ಇಪಿಎಫ್‌ಒ ಮುಖ್ಯಸ್ಥರ ಸಭೆಯಲ್ಲಿ ಭವಿಷ್ಯ ನಿಧಿಯ ಬಡ್ಡಿದರವನ್ನು 8.55ಕ್ಕೆ ನಿಗದಿಗೊಳಿಸಿ ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿತ್ತು.
ಆದರೆ, ಕರ್ನಾಟಕ ಚುನಾವಣೆ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.