ಗುಡ್ ನ್ಯೂಸ್ : ತೈಲ ದರದಲ್ಲಿ ಮತ್ತಷ್ಟು ಇಳಿಕೆ

First Published Jun 8, 2018, 1:29 PM IST
Highlights

ದಿನದಿನಕ್ಕೂ ಗಗನಕ್ಕೇರಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮೇಣ ಇಳಿಕೆಯಾಗುತ್ತಿದೆ. ಸತತ 10 ನೇ ದಿನವೂ ತೈಲ ದರದಲ್ಲಿ ಇಳಿಕೆ ಕಂಡು ಬಂದಿದೆ.

ನವದೆಹಲಿ(ಜೂ.8): ದಿನದಿನಕ್ಕೂ ಗಗನಕ್ಕೇರಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮೇಣ ಇಳಿಕೆಯಾಗುತ್ತಿದೆ. ಸತತ 10 ನೇ ದಿನವೂ ತೈಲ ದರದಲ್ಲಿ ಇಳಿಕೆ ಕಂಡು ಬಂದಿದೆ.

ಇಂದು ಬೆಳಗ್ಗೆ ಪೆಟ್ರೋಲ್ ದರಲ್ಲಿ ಭರ್ಜರಿ 21 ಪೈಸೆಯಷ್ಟು ಇಳಿಕೆಯಾಗಿದೆ.   ಡೀಸೆಲ್ ದರದಲ್ಲಿ 16 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ಅಂತಾರಾಷ್ಟ್ರೀಯ ತೈಲ ಮಾರು ಕಟ್ಟೆಯಲ್ಲಿ ಕಚ್ಛಾ ತೈಲ ದರದಲ್ಲಿ ಗಣನೀಯ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ದರ ಕಡಿಮೆ ಮಾಡಲಾಗುತ್ತಿದೆ. 

ಸದ್ಯ ದರ ಇಳಿಕೆಯಿಂದ  ದೆಹಲಿಯಲ್ಲಿ ಪೆಟ್ರೋಲ್ ದರವು 77.42 ರು.ನಷ್ಟಿದ್ದು, ಡೀಸೆಲ್ ದರವು 68.58 ರುನಷ್ಟಿದೆ. ಮುಂಬೈ, ಚೆನ್ನೈ ಹಾಗೂ ಕೋಲ್ಕತಾಗಳಲ್ಲಿಯೂ ಕೂಡ ಪೆಟ್ರೋಲ್ ಡೀಸೆಲ್ ದದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. 

ಈ ಹಿಂದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರವು 80 ರು.ಗಿಂತಲೂ ಕೂಡ ಅಧಿಕವಾಗಿದ್ದು, ಇದೀಗ ಕ್ರಮೇಣ ಇಳಿಮುಖವಾಗುತ್ತಿದೆ.

click me!