ವಾಹನ ಸವಾರರಿಗೆ ಶಾಕ್ : ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ

First Published May 14, 2018, 1:07 PM IST
Highlights

ಕರ್ನಾಟಕ ಚುನಾವಣಾ ಬಿಸಿಯಲ್ಲಿರುವಾಗಲೇ ವಾಹನ ಸವಾರರಿಗೆ  ಮತ್ತೊಂದು  ಶಾಕ್ ತಗುಲಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ  ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. 

ಬೆಂಗಳೂರು : ಕರ್ನಾಟಕ ಚುನಾವಣಾ ಬಿಸಿಯಲ್ಲಿರುವಾಗಲೇ ವಾಹನ ಸವಾರರಿಗೆ  ಮತ್ತೊಂದು  ಶಾಕ್ ತಗುಲಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ  ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. 

ಕರ್ನಾಟಕ ಚುನಾವಣೆ ನಡೆದು 2 ದಿನ ಆಗಿದ್ದು, ಫಲಿತಾಂಶಕ್ಕೆ ಒಂದು ದಿನ  ಬಾಕಿ ಇರುವಾಗಲೇ ಬೆಲೆಯಲ್ಲಿ ಏರಿಕೆಯಾಗಿದೆ.  ಕಳೆದ ಏಪ್ರಿಲ್ 24 ರ ಬಳಿಕ ಮೊದಲ ಬಾರಿ ತೈಲ ಬೆಲೆ ಹೆಚ್ಚಳವಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ  17 ಪೈಸೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರದಲ್ಲಿ 21 ಪೈಸೆಯಷ್ಟು ಏರಿಕೆ ಕಂಡು ಬಂದಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕೊಂಚ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಲ್ಲಿಯೂ ವಾಹನ ಸವಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.  ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 74.63 ಪೈಸೆ ಇದ್ದು, ಪ್ರತೀ ಲೀಟರ್ ಡೀಸೆಲ್ ದರ 66.14 ರು.ಗಳಷ್ಟಿದೆ. 

click me!